Publish Date: Thu, 10 Jan 2019 (11:37 IST)
Updated Date: Thu, 10 Jan 2019 (11:39 IST)
ಸುತ್ತಮುತ್ತಲ ಗ್ರಾಮಗಳಲ್ಲಿ ಹಸು, ಕುರಿ ತಿಂದು ಹಾಕಿ ಉಪಟಳ ಕೊಡ್ತಿದ್ದ ಹಂತಕ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಬಳಿ ಘಟನೆ ನಡೆದಿದೆ. ಸುಮಾರು ಒಂದುವರೆ ವರ್ಷದ ಗಂಡು ಚಿರತೆ ಸೆರೆಯಾಗಿದೆ.
ಸುತ್ತಮುತ್ತಲ ಗ್ರಾಮಗಳಲ್ಲಿ ಹಸು, ಕುರಿ ತಿಂದು ಹಾಕಿ ಉಪಟಳ ಕೊಡ್ತಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಶ್ರೀನಿವಾಸ್ ಅಗ್ರಹಾರ ಗ್ರಾಮದ ಮನೆಯೊಂದರಲ್ಲಿ ಕರು ಕೊಂದು ತಿಂದಿದ್ದ ಚಿರತೆ ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಗ್ರಾಮಸ್ಥರ ದೂರಿನ ಮೇರೆಗೆ ಹಂತಕ ಚಿರತೆ ಸೆರೆಗೆ ಬೋನ್ ಇಟ್ಟಿದ್ದರು ಅರಣ್ಯ ಇಲಾಖೆಯವರು.
ಬೋನಿಗೆ ಬಿದ್ದಿರೋ ಹಂತಕ ಚಿರತೆಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದರು. ಸೆರೆ ಸಿಕ್ಕ ಚಿರತೆಯನ್ನು ಚಾಮರಾಜನಗರ ಅರಣ್ಯಕ್ಕೆ ಬಿಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.