Select Your Language

Notifications

webdunia
webdunia
webdunia
webdunia

ಆ ಗ್ರಾಮಸ್ಥರು ಮೊಸಳೆ ಸೆರೆಹಿಡಿದದ್ದು ಹೇಗೆ ಗೊತ್ತಾ?

ಆ ಗ್ರಾಮಸ್ಥರು ಮೊಸಳೆ ಸೆರೆಹಿಡಿದದ್ದು ಹೇಗೆ ಗೊತ್ತಾ?
ವಿಜಯಪುರ , ಮಂಗಳವಾರ, 11 ಡಿಸೆಂಬರ್ 2018 (14:27 IST)
ಆ ಗ್ರಾಮದ ಬಸವೇಶ್ವರ ದೇವಾಲಯ ಆವರಣದಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು. ಕೂಡಲೇ ಅಲ್ಲಿನ ಯುವಜನತೆ ಒಗ್ಗಟ್ಟಾಗಿ ಭಯಾನಕವಾದ ಮೊಸಳೆಯನ್ನು ಸೆರೆಹಿಡಿದಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗುಂಡಕರ್ಚಗಿ ಗ್ರಾಮದ ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಮೊಸಳೆಯನ್ನು ನೋಡಿದ ಗ್ರಾಮಸ್ಥರು ತಕ್ಷಣವೇ ಯುವಕರ ಜತೆ ಸೇರಿ, ಮೊಸಳೆ ಹಿಡಿದು ಗ್ರಾಮದ ಬಸವೇಶ್ವರ ದೇವಾಲಯ ಆವರಣದಲ್ಲಿ ತಂದಿಟ್ಟರು. ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆಯನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಹಿಂದೆ ಹಳ್ಳದ ಪಕ್ಕದಲ್ಲಿ ಕುರಿಗಾಯಿಯ ವಾಸವಿದ್ದು, ಈ ಮೊಸಳೆ ನೀರು ಕುಡಿಯಲು ಹೋದ ಎರಡು ಕುರಿಗಳನ್ನು ತಿಂದು ಹಾಕಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ದೇವೇಗೌಡರು ಹೇಳಿದ್ದೇನು?