Publish Date: Thu, 10 Jan 2019 (11:33 IST)
Updated Date: Thu, 10 Jan 2019 (11:36 IST)
ತುಂಬಿ ಹರಿಯುತ್ತಿರುವ ತುಂಬೆ ವೆಂಟೆಂಡ್ ಡ್ಯಾಮ್ ನಲ್ಲಿ ಗಂಗಾ ಪೂಜೆ ಸಲ್ಲಿಸಲಾಗಿದೆ. ಗ್ರಾಮಸ್ಥರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಿದ ಬಳಿಕ ಬಾಗಿನ ಅರ್ಪಣೆ ಮಾಡಲಾಯಿತು.
ಮಂಗಳೂರು ಮೇಯರ್ ಭಾಸ್ಕರ್ ಮೊಯಿಲಿ, ಮಾಜಿ ಸಚಿವ ರಮಾನಾಥ ರೈ, ಮಂಗಳೂರು ಮಹಾ ನಗರ ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಐವನ್ ಡಿಸೋಜರಿಂದ ಬಾಗಿನ ಅರ್ಪಣೆ ನಡೆಯಿತು.
ಪಾಲಿಕೆ ಆಯುಕ್ತ ನಝೀರ್, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮನಪ ಸದಸ್ಯರು ಉಪಸ್ಥಿತಿ ಇದ್ದರು.