Select Your Language

Notifications

webdunia
webdunia
webdunia
webdunia

ಮನೆ ಅಂಗಳದಲ್ಲಿ 12 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ್ಯ: ಮುಂದೇನಾಯ್ತು?

ಮನೆ ಅಂಗಳದಲ್ಲಿ 12 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ್ಯ: ಮುಂದೇನಾಯ್ತು?
ಚಿಕ್ಕಮಗಳೂರು , ಭಾನುವಾರ, 23 ಡಿಸೆಂಬರ್ 2018 (16:37 IST)
ಮನೆಯೊಂದರ ಅಂಗಳದಲ್ಲಿ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ್ಯವಾದ ಘಟನೆ ನಡೆದಿದೆ.
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ. ಮನೆಯ ಆವರಣಕ್ಕೆ ಬಂದಿದ್ದ ಕಾಳಿಂಗ ಸರ್ಪ ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಘಟನೆ ನಡೆದಿದೆ.

ರಾಘವೇಂದ್ರ ಎಂಬುವರ ಮನೆ ಆವರಣದಲ್ಲಿದ್ದ ಕಾಳಿಂಗ ಸರ್ಪ ಕಂಡು ಬಂದಿದೆ. ಕಾಳಿಂಗನನ್ನ ಕಂಡು ಭಯಭೀತರಾಗಿದ್ದರು ಮನೆಯವರು. ಆಗ ಉರಗ ತಜ್ಞ ಹರೀಂದ್ರರಿಂದ ಕಾಳಿಂಗ ಸರ್ಪ ಸೆರೆ ಹಿಡಿಯಲಾಯಿತು.

12 ಅಡಿ ಕಾಳಿಂಗ ಸರ್ಪ ಕಂಡು ಬೆಚ್ಚಿ ಬಿದ್ದ ಸ್ಥಳೀಯರು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಳಿಂಗನನ್ನ ಸೆರೆ ಹಿಡಿದು ಕಾಡಿಗೆ ಬಿಡಲಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಜೆಸಿಬಿ ತಂದು ಮನೆ ಕಂಪೌಂಡ್ ಡೆಮಾಲಿಶ್ ಮಾಡಿದ ಪಿಡಿಓ