Publish Date: Sun, 23 Dec 2018 (16:35 IST)
Updated Date: Sun, 23 Dec 2018 (16:37 IST)
ಏಕಾಏಕಿ ಜೆಸಿಬಿ ತಂದು ಮನೆಯೊಂದರ ಕಾಂಪೌಂಡ್ ಮತ್ತು ಗೇಟ್ ನ್ನು ಪಿಡಿಓ ಒಬ್ಬರು ಡೆಮಾಲಿಶ್ ಮಾಡಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಗೂಳೂರು ಪಂಚಾಯಿತ್ ಪಿಡಿಒ, ಸದಸ್ಯರ ವಿರುದ್ದ ದಬ್ಬಾಳಿಕೆ ಆರೋಪ ಕೇಳಿಬಂದಿದೆ.
ಮಾನಂಗಿ ಗ್ರಾಮಸದ ಹನುಮಂತರಾಯಪ್ಪ ಗಂಗಮಾಯಮ್ಮ ದಂಪತಿಯಿಂದ ಆರೋಪ ಕೇಳಿಬಂದಿದೆ.
ತುಮಕೂರು ತಾಲೂಕು ಮಾನಂಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಿಡಿಒ ನಾಗಭೂಷಣ್, ಸದಸ್ಯರಾದ ಕೃಷ್ಣೆಗೌಡ, ನಿಂಗೇಗೌಡ, ಚಂದ್ರಪ್ಪರಿಂದ ದಬ್ಬಾಳಿಕೆ ನಡೆಸಲಾಗಿದೆ. ಏಕಾಏಕಿಯಾಗಿ ತಮ್ಮ ಮನೆ ಕಂಪೌಂಡ್ ಗೋಡೆ ಒಡೆಯಲಾಗಿದೆ ಎಂದು ದಂಪತಿ ದೂರಿದ್ದಾರೆ.
ತುಮಕೂರು ಗ್ರಾಮಾಂತರ ಠಾಣೆಗೆ ದಂಪತಿಗಳಿಂದ ದೂರು ಸಲ್ಲಿಕೆಯಾದರೂ, ಕ್ರಮ ಕೈಗೊಳ್ಳದ ಗ್ರಾಮಾಂತರ ಠಾಣೆಯ ಪೊಲೀಸರ ವಿರುದ್ಧ ದಂಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.