Select Your Language

Notifications

webdunia
webdunia
webdunia
webdunia

ಜನಸಂಖ್ಯೆ ಹೆಚ್ಚಿಸಲು ಇಟಲಿ ಸರ್ಕಾರದಿಂದ ದಂಪತಿಗಳಿಗೆ ಭರ್ಜರಿ ಆಫರ್

ಜನಸಂಖ್ಯೆ ಹೆಚ್ಚಿಸಲು ಇಟಲಿ ಸರ್ಕಾರದಿಂದ ದಂಪತಿಗಳಿಗೆ ಭರ್ಜರಿ ಆಫರ್
ರೋಮ್ , ಬುಧವಾರ, 7 ನವೆಂಬರ್ 2018 (15:56 IST)
ರೋಮ್ : ಯುರೋಪ್ ನಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಜನನವಾದ ಹಿನ್ನೆಲೆಯಲ್ಲಿ ಇದೀಗ ಇಟಲಿ ಸರ್ಕಾರ ಮೂರನೇ ಮಗುವನ್ನು ಹೊಂದಿರುವ ದಂಪತಿಗೆ ಉಡುಗೊರೆಯನ್ನು ನೀಡಲು ಮುಂದಾಗಿದೆ. 


2019 ರಿಂದ 2021 ರ ನಡುವೆ ಮೂರನೇ ಮಗುವನ್ನು ಹೊಂದಿರುವ ದಂಪತಿಗಳಿಗೆ 20 ವರ್ಷಗಳ ಕಾಲ ಕೃಷಿ ಮಾಡುವುದಕ್ಕಾಗಿ ಉಚಿತ ಭೂಮಿಯನ್ನು ನೀಡಲಾಗುತ್ತದೆ. ಜೊತೆಗೆ 2 ಲಕ್ಷದ ವರೆಗೆ ಬಡ್ಡಿ ಇಲ್ಲದೇ ಸಾಲವನ್ನು ಕೂಡ ನೀಡಲಾಗುತ್ತದೆ ಎಂದು ಇಟಲಿ ಸರ್ಕಾರ ಹೇಳಿದೆ.


ಆದರೆ ಯೋಜನೆಯು ವಿವಾಹಿತ ದಂಪತಿಗೆ ಮಾತ್ರ ಅನ್ವಯವಾಗಿದ್ದು, ಅವಿವಾಹಿತ ಪುರುಷ ಮಹಿಳೆಯರಿಗೆ ಅನ್ವಯಿಸುವುದಿಲ್ಲ. ಹಾಗೇ ಈ ಯೋಜನೆ ಪಡೆಯಲು ಬಯಸುವ ವಿದೇಶಿ ದಂಪತಿ ಕನಿಷ್ಠ 10 ವರ್ಷಗಳ ಕಾಲ ದೇಶದಲ್ಲಿ ವಾಸಿಸಬೇಕೆಂಬ ನಿಯಮವನ್ನು ವಿಧಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಜಿಲ್ಲಾಧ್ಯಕ್ಷನ ವಿರುದ್ಧ ಕೊಲೆ ಬೆದರಿಕೆ ಆರೋಪ