ಟೀಂ ಇಂಡಿಯಾ ಪಂದ್ಯಾರಂಭಕ್ಕೂ ಮುನ್ನ ಮೈದಾನದಲ್ಲಿ ಈ ಬದಲಾವಣೆ ಮಾಡಿದ ಯುಪಿ ಸರ್ಕಾರ

ಬುಧವಾರ, 7 ನವೆಂಬರ್ 2018 (09:00 IST)
ಲಕ್ನೋ: ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟಿ20 ಪಂದ್ಯಕ್ಕೂ ಮೊದಲು ಉತ್ತರ ಪ್ರದೇಶ ಸರ್ಕಾರ ಪಂದ್ಯ ನಡೆಯುವ ಮೈದಾನದ ಹೆಸರು ಬದಲಾವಣೆ ಮಾಡಿದೆ.

ಲಕ್ನೋದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಬಿಜೆಪಿ ಮುತ್ಸುದ್ದಿ, ಮಾಜಿ ಪ್ರಧಾನಿ ದಿವಂಗತ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹೆಸರಿಡಲಾಗಿದೆ. ವಾಜಪೇಯಿ ಇದೇ ಕ್ಷೇತ್ರದಲ್ಲಿ ಸಂಸತ್ ಪ್ರತಿನಿಧಿಸಿದವರು.

ಹೀಗಾಗಿ ಅವರ ಗೌರವಾರ್ಥ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಈ ನಿರ್ಧಾರ ಕೈಗೊಂಡಿತು. ಅದಕ್ಕೆ ಬೇಕಾದ ಸರ್ಕಾರಿ ನಿಯಮಾವಳಿಗಳನ್ನೂ ಸರ್ಕಾರ ತ್ವರಿತವಾಗಿ ಕೈಗೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಧೋನಿಯನ್ನು ತಂಡದಿಂದ ಕೈಬಿಟ್ಟ ಉದ್ದೇಶವೇ ಮರೆತ ಟೀಂ ಇಂಡಿಯಾ?!