ಉಪಚುನಾವಣೆಯಲ್ಲಿ ಬಿಜೆಪಿ ನೈತಿಕವಾಗಿ ಗೆದ್ದಿದೆ ಎಂದ ಶಾಸಕ

ಮಂಗಳವಾರ, 6 ನವೆಂಬರ್ 2018 (16:22 IST)
ಪಂಚ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹಿನ್ನೆಲೆ ಬಿಜೆಪಿ ಪಕ್ಷ ನೈತಿಕವಾಗಿ ಗೆದ್ದಿದೆ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಮೈತ್ರಿ ಕೂಟದ ವಿರುದ್ಧ ಬಿಜೆಪಿ ಚುನಾವಣೆ ಎದುರಿಸಿದ್ದು ನಮಗೆ ಪಾಠವಾಗಿದೆ. ಅಧಿಕಾರ, ಹಣದ ನಡುವೆ ಬಿಜೆಪಿ ಪಕ್ಷ ಪಂಚ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ.

ನೈತಿಕವಾಗಿ ಬಿಜೆಪಿ ಗೆದ್ದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೋರಾಟಕ್ಕೆ ಇದು ಪ್ರೇರಣೆಯಾಗಿದೆ ಎಂದಿದ್ದಾರೆ.
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚುನಾವಣೆ ಕಣದಿಂದ ಹಿಂದೆ ಹೋಗುವ ಮೂಲಕ ಬಿಜೆಪಿಗೆ ಅಭ್ಯರ್ಥಿ ಚಂದ್ರಶೇಖರ್ ಅವಮಾನ ಮಾಡಿದ್ದರು.

ಇದರ ನಡುವೆಯೂ ರಾಮನಗರದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಉಪ ಚುನಾವಣೆಯ ಫಲಿತಾಂಶ ಮುಂಬರುವ  ಯಾವುದೇ ಚುನಾವಣೆಗೆ ದಿಕ್ಸೂಚಿ ಅಲ್ಲ. ಪಕ್ಷ ಸಂಘಟನ್ಮಾತಕವಾಗಿ ಬೆಳೆಯುಲು ಇದು ವೇದಿಕೆಯಾಗಿದೆ.

ಪಕ್ಷದ ಸಿದ್ದಾಂತ ಹೊಂದಿದವರಿಗೆ ಟಿಕೆಟ್ ನೀಡುವುದು ನಮಗೆ ಒಂದು ಪಾಠ ಅನ್ನೋದನ್ನ ಈ ಚುನಾವಣೆ ಕಲಿಸಿದೆ ಎಂದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕುಖ್ಯಾತ ಬೈಕ್ ಕಳ್ಳತನ ಆರೋಪಿಗಳ ಬಂಧನ