Select Your Language

Notifications

webdunia
webdunia
webdunia
webdunia

ವಾಜಪೇಯಿ ಕ್ರೀಡಾಂಗಣಕ್ಕೆ ಭರ್ಜರಿ ಓಪನಿಂಗ್ ನೀಡಿದ ಟೀಂ ಇಂಡಿಯಾ

ವಾಜಪೇಯಿ ಕ್ರೀಡಾಂಗಣಕ್ಕೆ ಭರ್ಜರಿ ಓಪನಿಂಗ್ ನೀಡಿದ ಟೀಂ ಇಂಡಿಯಾ
ಲಕ್ನೋ , ಬುಧವಾರ, 7 ನವೆಂಬರ್ 2018 (08:43 IST)
ಲಕ್ನೋ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ನೂತನವಾಗಿ ನಾಮಕರಣಗೊಂಡ ಅಟಲ್ ಬಿಹಾರ್ ವಾಜಪೇಯಿ ಕ್ರೀಡಾಂಗಣಕ್ಕೆ ಭರ್ಜರಿ ಓಪನಿಂಗ್ ನೀಡಿದೆ.

ದ್ವಿತೀಯ ಪಂದ್ಯವನ್ನು 71 ರನ್ ಗಳಿಂದ ಟೀಂ ಇಂಡಿಯಾ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಅಬ್ಬರದ ಶತಕ ( 61 ಬಾಲ್ ಗಳಲ್ಲಿ 7 ಸಿಕ್ಸರ್ ಸಹಿತ 111 ರನ್) ಮತ್ತು ಶಿಖರ್ ಧವನ್ (43 ರನ್) ಉತ್ತಮ ಬ್ಯಾಟಿಂಗ್ ನಿಂದ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ರಿಷಬ್ ಪಂತ್ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಬಂದು ಸಿಡಿದ ಕೆಎಲ್ ರಾಹುಲ್ ಕೇವಲ 14 ಎಸೆತಗಳಲ್ಲಿ 26 ರನ್ ಗಳಿಸಿದರು.

ನಂತರ ಗುರಿ ಬೆನ್ನತ್ತಿದ ವಿಂಡೀಸ್ ಗೆ ಆರಂಭದಲ್ಲಿಯೇ ಖಲೀಲ್ ಅಹಮ್ಮದ್ ಎರಡು ವಿಕೆಟ್ ಕಿತ್ತು ಆಘಾತ ನೀಡಿದರು. ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ವಿಂಡೀಸ್ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತ 71 ರನ್ ಗಳ ಜಯ ಗಳಿಸಿದ್ದಲ್ಲದೆ, ಸರಣಿ ಕೈ ವಶ ಮಾಡಿಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಈ ತಂಡಕ್ಕೆ ಕೋಚ್ ಆಗ್ತಿದ್ದಾರೆ ಖ್ಯಾತ ಕ್ರಿಕೆಟಿಗ ಜಹೀರ್ ಖಾನ್