ಈ ತಂಡಕ್ಕೆ ಕೋಚ್ ಆಗ್ತಿದ್ದಾರೆ ಖ್ಯಾತ ಕ್ರಿಕೆಟಿಗ ಜಹೀರ್ ಖಾನ್

ಸೋಮವಾರ, 5 ನವೆಂಬರ್ 2018 (07:37 IST)
ಮುಂಬೈ: ಟೀಂ ಇಂಡಿಯಾದ ಇಂದಿನ ವೇಗಿಗಳಿಗೆ ಆದರ್ಶರೆನಿಸಿಕೊಂಡಿರುವ ಖ್ಯಾತ ವೇಗಿ ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದ ಕೋಚಿಂಗ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಎಲ್ಲಾ ಸರಿಯಾಗಿದ್ದರೆ ಜಹೀರ್ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಬೇಕಿತ್ತು. ಆದರೆ ಒಳ ರಾಜಕೀಯದಿಂದಾಗಿ ಅದು ಸಾಧ್ಯವಾಗಲಿಲ್ಲ. ಇಂದು ಭಾರತ ತಂಡದಲ್ಲಿ ಮಿಂಚುತ್ತಿರುವ ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಲವು ಬಾರಿ ತಮಗೆ ಜಹೀರ್ ಖಾನ್ ಪ್ರೇರಣೆ ಎಂದಿದ್ದರು.

ಜಹೀರ್ ಕರಾರುವಾಕ್ ಯಾರ್ಕರ್ ದಾಳಿಯನ್ನು ಇಂದಿಗೂ ಕ್ರಿಕೆಟ್ ಪ್ರೇಮಿಗಳು ಮರೆಯಲಾಗದು. ಇಂತಿಪ್ಪ ವೇಗಿ ಇದೀಗ ಮುಂದಿನ ಐಪಿಎಲ್ ಋತುವಿನಿಂದ ಮುಂಬೈ ಇಂಡಿಯನ್ಸ್ ಬೌಲರ್ ಗಳಿಗೆ ಕೋಚ್ ಆಗಲಿದ್ದಾರೆ. ಜಹೀರ್ ಹಿಂದೆ ಮುಂಬೈ ಇಂಡಿಯನ್ಸ್ ಪರ ಆಟಗಾರರಾಗಿದ್ದವರು. ಇದೀಗ ಕೋಚ್ ಆಗಿ ಕೆಲಸ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಸ್ಪೆಷಲ್ ಸ್ಥಳದಲ್ಲಿ ಪತ್ನಿ ಜತೆ ಬರ್ತ್ ಡೇ ಆಚರಿಸಿಕೊಳ್ಳಲಿರುವ ವಿರಾಟ್ ಕೊಹ್ಲಿ