Select Your Language

Notifications

webdunia
webdunia
webdunia
webdunia

ಗಣಿಗಾರಿಕೆಯಿಂದ KRS ಜಲಾಶಯಕ್ಕೆ ಅಪಾಯ?

ಗಣಿಗಾರಿಕೆಯಿಂದ KRS ಜಲಾಶಯಕ್ಕೆ  ಅಪಾಯ?
ಮಂಡ್ಯ , ಶನಿವಾರ, 15 ಡಿಸೆಂಬರ್ 2018 (15:36 IST)
ಗಣಿಗಾರಿಕೆಯಿಂದ KRS ಜಲಾಶಯಕ್ಕೆ  ಅಪಾಯವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜಲಾಶಯ ಹತ್ತಿರ ಗಣಿಗಾರಿಕೆ ನಿಷೇಧ ಮಾಡಲಾಗಿದೆ.

ಕೆ ಆರ್ ಎಸ್ ಜಲಾಶಯದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳಲು ಆಯಾ ಗ್ರಾಮ ಪಂಚಾಯಿತಿ PDO ಗಳಿಗೆ ಆದೇಶ ಹೊರಡಿಸಲಾಗಿದೆ.

ಪಾಂಡವಪುರ ತಾಲೂಕಿನ 9 ಗ್ರಾಪಂಗಳ PDOಗಳಿಗೆ  ಜಿ.ಪಂ., ಸಿ.ಇ.ಒ. ಯಾಲಕ್ಕಿಗೌಡ ನಿರ್ದೇಶನ ನೀಡಿದ್ದಾರೆ. ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ, ಚಿನಕುರುಳಿ, ಡಿಂಕಾ, ಲಕ್ಷ್ಮೀಸಾಗರ, ಕಟ್ಟೇರಿ, ಗುಮ್ಮನಹಳ್ಳಿ, ಟಿ.ಎಸ್.ಛತ್ರ, ಕನಗನಮರಡಿ ಗ್ರಾ.ಪಂ. PDOಗಳಿಗೆ ಆದೇಶ ಜಾರಿಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ತಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಯದಂತೆ ನೋಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಈಗಾಗಲೇ ಈ ಭಾಗದ ಪಂಚಾಯ್ತಿಗಳಲ್ಲಿ ಗಣಿಗಾರಿಕೆ ನಿಷೇಧ‌ ಮಾಡಲಾಗಿದೆ. ಅಕ್ರಮ ಗಣಿಗಾರಿಕೆ ಕಂಡು ಬಂದ್ರೆ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ PDOಗಳಿಗೆ ಸೂಚನೆ ನೀಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಜೊತೆಗೆ ಸರಸವಾಡುತ್ತಿದ್ದ ಪತ್ನಿಯನ್ನು ಕಂಡು ಪತಿ ಮಾಡಿದ್ದೇನು ಗೊತ್ತಾ?