Select Your Language

Notifications

webdunia
webdunia
webdunia
webdunia

ಕೆ.ಆರ್.ಎಸ್ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲು ಸಿಎಂ ಸೂಚನೆ

ಕೆ.ಆರ್.ಎಸ್ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲು ಸಿಎಂ ಸೂಚನೆ
ಮಂಡ್ಯ , ಭಾನುವಾರ, 12 ಆಗಸ್ಟ್ 2018 (15:28 IST)
ಕೆ.ಆರ್.ಎಸ್. ಜಲಾಶಯ ವೀಕ್ಷಣೆಗೆ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಸೀತಾಪುರದಲ್ಲಿ ನಾಟಿ ಕಾರ್ಯ ಮುಗಿಸಿದ ಬಳಿಕ  ಚುಂಚನಗಿರಿ ಶ್ರೀಗಳೊಂದಿಗೆ ಕೆ ಆರ್ ಎಸ್ ಗೆ ಆಗಮಿಸಿದ‌ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಅಣೆಕಟ್ಟೆ ವೀಕ್ಷಣೆ ಮಾಡಿದ್ರು, ಇದೇ ವೇಳೆ ಕೆ ಆರ್ ಎಸ್ ಡ್ಯಾಂ ನ ಗೇಟ್ ಗಳ ಬಳಿ ತೆರಳಿದ ಸಿಎಂ ಹೆಚ್ಡಿಕೆ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಶ್ರೀಗಳೊಂದಿಗೆ ಗೇಟ್‌ಗಳ ಬಳಿಯಿರುವ ಜಾಗದಲ್ಲಿ ಕುಳಿತು ಕೆಲಸಮಯ ಕಳೆದರು. ಆ ಬಳಿಕ ಡ್ಯಾಮ್ ವೀಕ್ಷಣೆಗೆ ಸಾರ್ವಜನಿಕರಿಗೂ ವ್ಯವಸ್ಥೆ ಕಲ್ಪಿಸುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ವೇಳೆ ಸಿಎಂ ಕುಮಾರಸ್ವಾಮಿ ಗೆ ಶಾಸಕರು‌ ಹಾಗೂ ಜಿಲ್ಲೆಯ ಸಚಿವರು ಕೂಡ ಸಾಥ್ ನೀಡಿದರು. ಸಿಎಂ ಹೇಳಿಕೆಯಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಖುಷ್ ಆದರು.



Share this Story:

Follow Webdunia kannada

ಮುಂದಿನ ಸುದ್ದಿ

ರದ್ದುಗೊಳ್ಳಲಿದೆಯಂತೆ ಎಸ್.ಬಿ.ಐ.ನ ಡೆಬಿಟ್ ಕಾರ್ಡ್