Daily Horoscope

Select Your Language

Notifications

webdunia
webdunia
webdunia
webdunia

ಬಿಜೆಪಿಯವರಂತೆ ಸದನದಲ್ಲಿ ಸಿಎಂ ಬ್ಲೂ ಫಿಲಂ ನೋಡ್ಬೇಕಾ ಎಂದ ಎಂಎಲ್ಸಿ!

ಬಿಜೆಪಿ
ಸಿಎಂ ಕುಮಾರಸ್ವಾಮಿ ನಾಟಿ ಮಾಡಿರುವುದಕ್ಕೆ ಬಿಜೆಪಿ ಟೀಕೆ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರ ವಿರುದ್ಧ ಜೆಡಿಎಸ್ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ. ಸಿಎಂ ನಾಟಿ ಮಾಡದೇ ಬಿಜೆಪಿಯವರಂತೆ ಸದನದಲ್ಲಿ ಕುಳಿತು ಬ್ಲೂಂ ಫೀಲಂ ನೋಡೋಕಾಗುತ್ತಾ ಎಂದು ಎಂಎಲ್ಸಿಯೊಬ್ಬರು ವ್ಯಂಗ್ಯವಾಡಿದ್ದಾರೆ.

 
ಸಿಎಂ ನಾಟಿ ಮಾಡೋದಕ್ಕೆ ಈಶ್ವರಪ್ಪ ಹಾಗೂ ಬಿಜೆಪಿ ಮುಖಂಡರ ವ್ಯಂಗ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸಿಎಂ ಕುಮಾರಸ್ವಾಮಿ ‌ರೈತನ ಮಗ. ರೈತನ ಮಗ ನಾಟಿ ಮಾಡ್ದೆ, ಕ್ಲಬ್ ನಲ್ಲಿ ಡ್ಯಾನ್ಸ್ ಮಾಡೋಕಾಗುತ್ತಾ? ಇಲ್ಲ ಬಿಜೆಪಿಯವರಂತೆ ಸದನದಲ್ಲಿ ಕೂತು ಬ್ಲೂ ಫಿಲ್ಮಂ ನೋಡೋಕಾಗುತ್ತಾ? ಬಿಜೆಪಿಯವ್ರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಧರ್ಮೇಗೌಡ‌ ಹೇಳಿಕೆ ನೀಡಿದ್ದಾರೆ.

ನಾವು ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಬಿಜೆಪಿಯವ್ರಿಗೆ ಚೆಂದ ಕಾಣಲ್ಲ. ನಮ್ಮ ಬಗ್ಗೆ‌ ಪ್ರತಿನಿತ್ಯ ಮಾತನಾಡದಿದ್ರೆ ಬಿಜೆಪಿಯವರಿಗೆ ಸಮಾಧಾನ ಆಗಲ್ಲ. ನಾವು ಕೂತ್ರು ನಿಂತ್ರು ಅವರು ಮಾತನಾಡೋದನ್ನು ನಿಲ್ಲುಸುತ್ತಿಲ್ಲ.
ನಮ್ಮ ಬಗ್ಗೆ ಮಾತನಾಡದಿದ್ರೆ ತಿಂದ ಅನ್ನ ಮೈಗೆ‌ ಹತ್ತಲ್ಲ ಅಂತೆಲ್ಲ ಟಾಂಗ್ ನೀಡಿದ್ದಾರೆ.

ನಾವು‌ ಏನೇ ಮಾಡಿದ್ರು ಬಿಜೆಪಿಯವರು ಮಾತಾಡ್ಬೇಕು, ಮಾತಾಡ್ತಾರೆ. ಸತ್ಯ ಏನೆಂಬುದು ಜನರಿಗೆ ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಧರ್ಮೇಗೌಡ‌ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಸ್ತೂರಿ ರಂಗನ್ ವರದಿ: ಸುಪ್ರೀಂ ಕೋರ್ಟಗೆ ಸರಕಾರ ವರದಿ ಸಲ್ಲಿಸಲಿ