Publish Date: Sat, 11 Aug 2018 (11:24 IST)
Updated Date: Sat, 11 Aug 2018 (11:28 IST)
ನವದೆಹಲಿ: ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಸಂಸತ್ತಿನಲ್ಲಿ ತನ್ನ ಬಗ್ಗೆ ಪ್ರಧಾನಿ ಮೋದಿ ಆಡಿದ ಆಕ್ಷೇಪಾರ್ಹ ಮಾತಿನ ಬಗ್ಗೆ ಕಾಂಗ್ರೆಸ್ ಸಂಸದ ಬಿಕೆ ಹರಿಪ್ರಸಾದ್ ಟ್ವಿಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಆಡಿದ್ದ ಮಾತುಗಳನ್ನು ವಿಪಕ್ಷಗಳ ತೀವ್ರ ವಿರೋಧದ ಹಿನ್ನಲೆಯಲ್ಲಿ ಸ್ಪೀಕರ್ ಕಡತದಿಂದ ಹೊರ ಹಾಕಿದ್ದರು. ಈ ರೀತಿ ಪ್ರಧಾನಿ ಆಡಿದ ಮಾತುಗಳನ್ನು ಕಡತದಿಂದ ಹೊರಹಾಕಿದ ಪ್ರಕರಣ ತೀರಾ ಅಪರೂಪ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಕೆ ಹರಿಪ್ರಸಾದ್ ‘ಪಿಎಂ ಎಂದರೆ ಈ ಶ್ರೇಷ್ಠ ದೇಶದ ಪ್ರಧಾನಿ ಎಂದು ಸೂಚಿಸುತ್ತದೆ. ಅಷ್ಟೇ ಅಲ್ಲ, ಒಬ್ಬ ರಾಜಕೀಯ ನಾಯಕ ತನ್ನ ರಾಜಕೀಯ ಶುರು ಮಾಡುವ ಪಂಚಾಯ್ ಮೆಂಬರ್ ಎನ್ನುವುದಕ್ಕೂ ಪಿಎಂ ಅಂತಾರೆ. ಆದರೆ ಪ್ರಧಾನಿ ಬಳಸಿದ ಪದಗಳನ್ನು ನೋಡಿದರೆ ಒಬ್ಬ ಪಂಚಾಯತ್ ಮೆಂಬರ್ ಕೂಡಾ ನಾಚಿಕೆ ಪಡುತ್ತಾನೆ’ ಎಂದು ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.