Publish Date: Sun, 12 Aug 2018 (14:51 IST)
Updated Date: Sun, 12 Aug 2018 (14:53 IST)
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಭತ್ತ ನಾಟಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ ಟಾಂಗ್ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಸೀತಾಪೂರದಲ್ಲಿ ಸಿಎಂ ಕುಮಾರಸ್ವಾಮಿ ನಾಟಿ ಕಾರ್ಯಕ್ರಮ ಬರೀ ಶೋ ಅಪ್ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ ಶೆಟ್ಟರ್, ಯಾವಾಗಲೋ ಒಮ್ಮೆ ನಾಟಿ ಮಾಡಿದರೆ ರೈತನಾಗೋದಿಲ್ಲ. ವಾರದಲ್ಲಿ ಮೂರು ದಿನವಾದರೂ ಕೃಷಿ ಚಟುವಟಿಕೆ ಮಾಡಬೇಕು. ಜಗದೀಶ ಶೆಟ್ಟ್ರು ಎಲ್ಲೋ ಕಡೆ ಹೊಲ ಉಳುಮೆ ಮಾಡಿದರೆ ರೈತನಾಗೋದಿಲ್ಲ, ಕೃಷಿ ಚಟುವಟಿಕೆ ದಿನನಿತ್ಯ ನಡೆದರೆ ಮಾತ್ರ ಆತ ರೈತ, ಮಣ್ಣಿನ ಮಗನಾಗಲು ಸಾಧ್ಯ, ಕೃಷಿ ಅನ್ನೋದು ನಮ್ಮ ದಿನ ನಿತ್ಯದ ಕಾರ್ಯವಾಗಬೇಕು ಎಂದಿದ್ದಾರೆ.
ಭತ್ತ ನಾಟಿ ಕಾರ್ಯಕ್ರಮ ದಿಂದ ರೈತರಿಗೆ ಯಾವುದೇ ಲಾಭವಿಲ್ಲ, ಗ್ರಾಮ ವಾಸ್ತವ್ಯದಿಂದ ಯಾವ ಹಳ್ಳಿಗಳು ಉದ್ದಾರವಾಗಿಲ್ಲ. ಕುಮಾರಸ್ವಾಮಿ ಅವರಿಗೆ ಕುಣಿಯಲು ಬಾರದಕ್ಕೆ ಅಂಗಳ ಡೊಂಕು ಎನ್ನುವಂತಾಗಿದೆ. ಮುಖ್ಯಮಂತ್ರಿ ಅವರಿಗೆ ರಾಜ್ಯಭಾರ ಮಾಡಲು ಆಗುತ್ತಿಲ್ಲ ಎಂದರು. ಗುತ್ತಿಗೆದಾರರ ಬಿಲ್ಲ ಹಾಗೂ ಸರಕಾರಿ ನೌಕರರ ಸಂಬಳ ಪಾವತ್ತಿಸುತ್ತಿಲ್ಲ ಎಂದು ದೂರಿದರು.