Select Your Language

Notifications

webdunia
webdunia
webdunia
webdunia

ನಾಟಿ ಮಾಡಲು ಬರುವ ಸಿಎಂ ಎಚ್ ಡಿಕೆಗೆ ಏನೆಲ್ಲಾ ಸ್ಪೆಷಲ್ ಐಟಂ ಮಾಡವ್ರೇ ಮಂಡ್ಯ ಮಂದಿ ಗೊತ್ತಾ?!

ಸಿಎಂ ಕುಮಾರಸ್ವಾಮಿ
ಮಂಡ್ಯ: ಸಿಎಂ ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಪೈರು ನಾಟಿ ಮಾಡುವ ಕಾರ್ಯದಲ್ಲಿ ರೈತರೊಂದಿಗೆ ತೊಡಗಿಸಿಕೊಳ‍್ಳಲಿದ್ದಾರೆ.

ರೈತರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ತಾವೇ ಗದ್ದೆಗೆ ಇಳಿದು ನಾಟಿ ಹಾಕಲು ನಿರ್ಧರಿಸಿರುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಕುಮಾರಸ್ವಾಮಿ ಇಂದು ಇಲ್ಲಿ ರೈತರಂತೇ ಗದ್ದೆಗೆ ಇಳಿದು ನಾಟಿ ಮಾಡುವುದಲ್ಲದೆ, ಅಲ್ಲಿಯೇ ರೈತರೊಂದಿಗೆ ಊಟ ಮಾಡಲಿದ್ದಾರೆ.

ಈಗಾಗಲೇ ಸೀತಾಪುರದ ಜಮೀನಿನಲ್ಲಿ ಸಿಎಂ ಸ್ವಾಗತಕ್ಕೆ ಸಕಲ ರೀತಿಯ ತಯಾರಿ ನಡೆದಿದೆ. ಸಿಎಂ ಜತೆ ಪೈರು ನಾಟಿ ಮಾಡಲು ಮಹಿಳೆಯರು, ಪುರುಷರು ಸಿದ್ಧರಾಗಿದ್ದಾರೆ. ಕುಮಾರಸ್ವಾಮಿಗಾಗಿ ಮುದ್ದೆ, ಸಾರು ತಯಾರು ಮಾಡುವುದಾಗಿ ರೈತ ಮಹಿಳೆಯರು ಖುಷಿಯಿಂದಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಬ್ಯಾಟರಿ ಸೇವ್ ಮಾಡಲು ಕೆಲವು ಟಿಪ್ಸ್