Publish Date: Sat, 11 Aug 2018 (09:07 IST)
Updated Date: Sat, 11 Aug 2018 (09:09 IST)
ಬೆಂಗಳೂರು: ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಎಲ್ಲಾ ಸೌಕರ್ಯಗಳೂ ಬೆರಳ ತುದಿಯಲ್ಲೇ ಇವೆ. ಆದರೆ ಮೊಬೈಲ್ ಗೆ ಬ್ಯಾಟರಿ ಚಾರ್ಜ್ ಮಾಡಿ ಸಾಕಾಗಿ ಹೋಗುತ್ತದೆ ಎಂದು ಅನಿಸುತ್ತಿದೆಯೇ? ಹಾಗಿದ್ದರೆ ಬ್ಯಾಟರಿ ಸೇವ್ ಮಾಡಲು ಕೆಲವು ಉಪಾಯಗಳನ್ನು ಮಾಡಿ ನೋಡಿ.
ಬ್ರೈಟ್ ನೆಸ್ ಕಡಿಮೆ ಮಾಡಿ
ಸಾಮಾನ್ಯವಾಗಿ ಮೊಬೈಲ್ ಬಳಕೆದಾರರು ಸ್ಕ್ರೀನ್ ಡಿಸ್ ಪ್ಲೇ ಚೆನ್ನಾಗಿ ಕಾಣಬೇಕೆಂದು ಬ್ರೈಟ್ ನೆಸ್ ಲೆವೆಲ್ ಹೆಚ್ಚು ಮಾಡಿರುತ್ತಾರೆ. ಮನೆ, ಕಚೇರಿಯೊಳಗಿದ್ದಾಗ ಬ್ರೈಟ್ ನೆಸ್ ಲೆವೆಲ್ ಕಡಿಮೆ ಮಾಡಿಕೊಂಡರೆ ಬ್ಯಾಟರಿಯೂ ಉಳಿಸಬಹುದು.
ಆಪ್ ಗಳು
ಕೆಲವು ಆಪ್ ಗಳು ನಿಮ್ಮ ಫೋನ್ ನ ಬಹುಪಾಲು ಬ್ಯಾಟರಿಯನ್ನು ತಿಂದು ಹಾಕುತ್ತವೆ. ಅಂತಹ ಆಪ್ ಗಳ ಬಗ್ಗೆ ಎಚ್ಚರಿಕೆ ಸಂದೇಶ ಬಂದರೆ ತಕ್ಷಣ ಆಪ್ ಡಿಲೀಟ್ ಮಾಡಿ.
ಕೆಲವು ಬಟನ್ ಗಳನ್ನು ಆಫ್ ಮಾಡಿ
ಬ್ಲೂಟೂಥ್, ಡಾಟಾ ಕನೆಕ್ಷನ್, ಲೊಕೇಷನ್ ಸರ್ವಿಸ್ ಗಳನ್ನು ಬಂದ್ ಮಾಡಿ. ಬೇಕೆಂದಾಗ ಮಾತ್ರ ಆನ್ ಮಾಡಿಕೊಂಡಲ್ಲಿ ಬ್ಯಾಟರಿ ಉಳಿಸಬಹುದು.
ಬಟನ್ ಸೌಂಡ್ ಆಫ್
ಕೆಲವರು ಕೀ ಬಟನ್ ಪ್ರೆಸ್ ಮಾಡುವಾಗ ಸೌಂಡ್ ಆನ್ ಆಗಿರುವಂತೆ ಸೆಟ್ಟಿಂಗ್ ಮಾಡಿರುತ್ತಾರೆ. ಇದು ಅನಗತ್ಯ. ಹಾಗೂ ಅನಗತ್ಯವಾಗಿ ಬ್ಯಾಟರಿ ಕಳೆಯುವ ದಾರಿ. ಹಾಗಾಗಿ ಕೀ ಸೌಂಡ್ ಆಫ್ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.