Publish Date: Fri, 10 Aug 2018 (20:12 IST)
Updated Date: Fri, 10 Aug 2018 (20:14 IST)
ವೃದ್ಧಾಶ್ರಮ ಎಂದರೆ ವೃದ್ಧರು ಆರಾಮಾಗಿ ತಿಂದುಂಡು ತಮ್ಮ ಕೊನೆ ದಿನಗಳನ್ನು ಕಳೆಯುತ್ತಾರೆ ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ ಆ ವೃದ್ಧಶ್ರಮದಲ್ಲಿರುವ ಬಹುತೇಕ ಮಂದಿ ಮಾನಸಿಕ ಅಸ್ವಸ್ಥರಾಗಿದ್ದಾರೆ ಎನ್ನುವ ಕಳವಳಕಾರಿ ವಿಷಯ ಬಹಿರಂಗಗೊಂಡಿದೆ.
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರಾಜ್ಲಾದಲ್ಲಿರುವ ವೃದ್ದಾಶ್ರಮದಲ್ಲಿ 20ಕ್ಕೂ ಹೆಚ್ಚು ವೃದ್ಧರು ಮಾನಸಿಕ ಅಸ್ವಸ್ಥರಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಈಚೆಗಷ್ಟೇ ನಿರಾಶ್ರಿತರ ಗೃಹದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಡೆಸಿದ ತನಿಖೆ ವೇಳೆ ಮಾ ವಿಂದ್ಯಾವಾಸಿನಿ ಮಹಿಳಾ ಪ್ರಶಿಕ್ಷಣ್ ಏವಂ ಸಮಾಜ್ ಸೇವಾ ಸಂಸ್ಥಾನ್ ನಲ್ಲಿನ 20ಕ್ಕೂ ಹೆಚ್ಚು ವೃದ್ಧರನ್ನು ವೈದ್ಯಕೀಯ ಕಾಲೇಜಿನಲ್ಲಿ ತಪಾಸಣೆ ನಡೆಸಿದ ವೇಳೆ ಮಾನಸಿಕವಾಗಿ ಅಸ್ವಸ್ಥರಾಗಿರುವ ವಿಷಯ ಬೆಳಕಿಗೆ ಬಂದಿದೆ.