Select Your Language

Notifications

webdunia
webdunia
webdunia
webdunia

ನಿದ್ದೆಯಲ್ಲಿ ಹಠಾತ್ತಾಗಿ ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತಾರೆ. ಇದು ದೆವ್ವಗಳ ಕಾಟವೇ?

ನಿದ್ದೆಯಲ್ಲಿ ಹಠಾತ್ತಾಗಿ ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತಾರೆ. ಇದು ದೆವ್ವಗಳ ಕಾಟವೇ?
ಬೆಂಗಳೂರು , ಸೋಮವಾರ, 28 ಮೇ 2018 (06:24 IST)
ಬೆಂಗಳೂರು : ಕೆಲವರು  ನಿದ್ದೆಯಲ್ಲಿ ಹಠಾತ್ತಾಗಿ ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತಾರೆ. ಅಂತವರಿಗೆ ಶರೀರವನ್ನು ಎತ್ತೆತ್ತಿ ಹಾಕಿದ ಹಾಗೆ ಅನಿಸುತ್ತದೆ. ಹೀಗಾದನಂತರ ನಿದ್ದೆಗೆ ಜಾರಲು 5 ರಿಂದ 10 ನಿಮಿಷ ಹಿಡಿಯುತ್ತದೆ. ಕೆಲವರಿಗೆ ಬೆಚ್ಚಿ ಬೀಳುವಿಕೆಯು ಕನಸು ಬೀಳುವುದರಿಂದ ಉಂಟಾದರೆ,ಇನ್ನು ಕೆಲವರಿಗೆ ಇತರೆ ಕಾರಣಗಳಿಂದ ಉಂಟಾಗುತ್ತದೆ. ಹೀಗೆ ಬಹಳಷ್ಟು ಮಂದಿಗೆ ಆಗುತ್ತಲೇ ಇರುತ್ತದೆ. ಕೆಲವರು ಇದನ್ನು ದೆವ್ವಗಳಿಂದ ಸಂಭವಿಸುವ ತೊಂದರೆ ಎನ್ನುತ್ತಾರೆ. ಆದರೆ ಇದಕ್ಕೆ ನಿಜವಾದ ಕಾರಣವೇನೆಂದು ತಿಳಿಯೋಣ.


ನಿದ್ದೆಯಲ್ಲಿ ಬೆಚ್ಚಿಬೀಳುವುದು ಅಷ್ಟೇನೂ ದೊಡ್ಡ ಸಮಸ್ಯೆಯಲ್ಲ. ಇದು ದೆವ್ವಗಳ ಕಾಟವಂತು ಅಲ್ಲವೇಅಲ್ಲ.ಇಂತಹ ಅಭ್ಯಾಸವಿರುವವರು ಯೋಚಿಸಬೇಕಾದ ಅಗತ್ಯವಿಲ್ಲ. ಇದನ್ನು ‘ಹೈಪ್ನಿಕ್ ಜರ್ಕ್( ಕುಲುಕು)’ ಎನ್ನುತ್ತಾರೆ. ಈ ವಿಷಯವಾಗಿ ವಿಜ್ಞಾನಿಗಳು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ನಡೆಸಿದ ಸಂಶೋಧನೆಗಳಿಂದ ತಿಳಿದು ಬಂದ ಕಾರಣಗಳೆಂದರೆ.

ಬಹಳ ಬೇಗ ಮಲಗಿಕೊಳ್ಳುವುದರಿಂದ ಹೀಗಾಗುತ್ತದಂತೆ. ನಾವು ನಿದ್ದೆ ಮಾಡುತ್ತಿರುವ ಸಮಯದಲ್ಲಿ ನಮ್ಮ ಮಿದುಳು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುವುದರಿಂದ ನಮ್ಮ ಶರೀರದ ಅವಯವಗಳು ಉತ್ತೇಜಿತಗೊಂಡು ಒಮ್ಮೆಲೇ ಕದುಲುತ್ತವಂತೆ.


ಕೆಲವರು ನಿದ್ದೆಗೆ ಜಾರಿಕೊಂಡ ತಕ್ಷಣ ಕೆಲವು ಭಯಾನಕ ಕನಸುಗಳನ್ನು ಕಾಣುತ್ತಾರೆ. ದೊಡ್ಡ ಬೆಟ್ಟಗಳ ಮೇಲಿಂದ, ಮರಗಳ ಮೇಲಿಂದ ಕೆಳಗೆ ಬೀಳುತ್ತಿರುವ ಹಾಗೆ, ಕೆಲವು ಭಯಾನಕ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಹಾಗೆ ಕನಸು ಕಂಡಾಗ ಬೆಚ್ಚಿ ಬಿದ್ದು ಎಚ್ಚರಗೊಳ್ಳುತ್ತಾರೆ.ನಿದ್ರಾ ಹೀನತೆ ,ಮಾನಸಿಕ ಒತ್ತಡ ಹಾಗೂ ವಿಶ್ರಾಂತಿ ಕೊರತೆಯಿಂದಲೂ ಹೀಗೆ ಆಗುತ್ತದಂತೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫೆಂಗ್‍ಶುಯ್ ವಾಸ್ತು ಪ್ರಕಾರ ಕುದುರೆ ಚಿತ್ರಗಳು ಮನೆ ಅಥವಾ ಆಫೀಸಿನಲ್ಲಿ ಇಟ್ಟುಕೊಂಡರೆ ಏನಾಗುತ್ತದೆ ಗೊತ್ತಾ?