ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಹಕರಿಗೆ ಆಯಸ್ಕಾಂತೀಯ ಡೆಬಿಟ್ ಕಾರ್ಡ್ ಸುರಕ್ಷಿತವಲ್ಲ ಎಂಬ ಕಾರಣಕ್ಕಾಗಿ ಅದನ್ನು ರದ್ದುಗೊಳಿಸಿ ಇಎಂವಿ ಚಿಪ್ ನ ಡೆಬಿಟ್ ಕಾರ್ಡ್ ನ್ನು ನೀಡುವುದಾಗಿ ತಿಳಿಸಿದೆ.
ಡಿಸೆಂಬರ್ 31,2018 ರೊಳಗೆ ಇಎಂವಿ ಚಿಪ್ ಹೊಂದಿರುವ ಕಾರ್ಡ್ ಜಾರಿಗೆ ಬರಲಿದ್ದು, ಹಳೆ ಕಾರ್ಡ್ ನಿಷ್ಪ್ರಯೋಜಕವಾಗಲಿದೆ. ಆದ್ದರಿಂದ ಗ್ರಾಹಕರು ಹೊಸ ಕಾರ್ಡ್ ಪಡೆಯಲು ಡಿಸೆಂಬರ್ 31,2018 ರವರೆಗೆ ಅವಕಾಶವಿದೆ ಎಂಬುದಾಗಿ ಬ್ಯಾಂಕ್ ತಿಳಿಸಿದೆ.
ಹೊಸ ಡೆಬಿಟ್ ಕಾರ್ಡ್ ಪಡೆಯಲು ಗ್ರಾಹಕರು ಬ್ಯಾಂಕ್ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ ಬ್ಯಾಂಕಿನ ಶಾಖೆಗೆ ಹೋಗಿ ಕೂಡ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ