Publish Date: Thu, 29 Nov 2018 (17:20 IST)
Updated Date: Thu, 29 Nov 2018 (17:34 IST)
ಸ್ಕಿಮ್ಮಿಂಗ್ ಯಂತ್ರ ಇಟ್ಟು ಎಟಿಎಂಗಳಿಂದ ಗ್ರಾಹಕರ ಹಣ ದೋಚುತ್ತಿದ್ದ ಉಗಾಂಡ ಮೂಲದ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಬುಸಾಬ್ಪಾಳ್ಯದ ನಯಾರೋ ಎಸ್ವೇಲ್(35)ಬಂಧಿತ ಆರೋಪಿಯಾಗಿದ್ದಾನೆ. ಉಗಾಂಡ ಮೂಲದ ನಗರದಲ್ಲಿನ ಪ್ರಮುಖ ಎಟಿಎಂಗಳನ್ನು ಗುರಿಯಾಗಿಸಿಕೊಂಡು ಹೊಂಚು ಹಾಕುತ್ತಿದ್ದ. ಸೆಕ್ಯೂರಿಟಿಗೂ ಗೊತ್ತಾಗದ್ದಂತೆ ಎಟಿಎಂಗೆ ಸ್ಕಿಮ್ಮಿಂಗ್ ಮಿಷನ್ ಅಳವಡಿಸುತ್ತಿದ್ದನು. ಅದರಿಂದ ಮಾಹಿತಿ ಆಧರಿಸಿ ಆರೋಪಿಯು ಗ್ರಾಹಕರಿಗೆ ತಿಳಿಯದೆ ಹಣ ಎಗರಿಸುತ್ತಿದ್ದನು.
ರಾಜಾಜಿನಗರ ಬಳಿ ಎಟಿಎಂ ಕೇಂದ್ರವೊಂದಕ್ಕೆ ಸ್ಕಿಮ್ಮಿಂಗ್ ಯಂತ್ರವಿಡುತ್ತಿರುವುದನ್ನು ಸಿಸಿ ಕ್ಯಾಮಾರದಲ್ಲಿ ಗಮನಿಸಿದ ಬ್ಯಾಂಕ್ ಸಿಬ್ಬಂದಿ ರಾಜಾಜಿನಗರ ಪೊಲೀಸರಿಗೆ ತಿಳಿಸಿ ಆರೋಪಿಯನ್ನು ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.