Select Your Language

Notifications

webdunia
webdunia
webdunia
webdunia

ಎಟಿಎಂ ಒಳಗಡೆ ಮಹಿಳೆಯ ಮೇಲೆ ನಡೆದಿದೆ ಇಂತಹ ಅಮಾನವೀಯ ಕೃತ್ಯ

ಎಟಿಎಂ ಒಳಗಡೆ ಮಹಿಳೆಯ ಮೇಲೆ ನಡೆದಿದೆ ಇಂತಹ ಅಮಾನವೀಯ ಕೃತ್ಯ
ಒಡಿಶಾ , ಮಂಗಳವಾರ, 20 ನವೆಂಬರ್ 2018 (10:15 IST)
ಒಡಿಶಾ : ಎಟಿಎಂ ಒಳಗಡೆಯೇ ಮಹಿಳೆಯ ಮೇಲೆ ಕಾಮುಕರಿಬ್ಬರು ಅತ್ಯಾಚಾರ ಎಸಗಿದ ಘಟನೆ ಒಡಿಶಾದ ಕಟಕ್ ನಲ್ಲಿ ನಡೆದಿದೆ.


ಹಣ ಡ್ರಾ ಮಾಡಲು ಮಹಿಳೆಯೊಬ್ಬಳು ಕಟಕ್ ನಗರದ ಪಿಲ್‍ಗ್ರೀಮ್ ರಸ್ತೆಯ ಎಟಿಎಂನ ಒಳಗೆ ಹೋದಾಗ ಕಾಮುಕರಿಬ್ಬರು ಒಳಗೆ ನುಗ್ಗಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಆಕೆಯನ್ನು ಹೊರಗೆ ತಳ್ಳಿ ಪರಾರಿಯಾಗಿದ್ದಾರೆ.


ಎಟಿಎಂನ ಹೊರಗಡೆ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ನೋಡಿದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಚೇತರಿಸಿಕೊಂಡ ನಂತರ ಆಕೆಯಿಂದ ಹೇಳಿಕೆ ಪಡೆದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಂನ ಭದ್ರತಾ ಸಿಬ್ಬಂದಿ ಮತ್ತು ಆರೋಪಿಗಳ ಸ್ನೇಹಿತರಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆಗೆ ದಂಧೆ ನಡೆಸುತ್ತಿದ್ದ ದಲ್ಲಾಳಿ ಅರೆಸ್ಟ್