ಎಸ್.ಬಿ.ಐ.ನ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ. ಹೆಚ್ಚಿನ ವಿವರ ಇಲ್ಲಿದೆ ನೋಡಿ

ಗುರುವಾರ, 10 ಜನವರಿ 2019 (07:39 IST)
ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿಯಿರುವ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಅದಕ್ಕಾಗಿ ಆನ್ಲೈನ್ ಮೂಲಕ ಎಸ್.ಬಿ.ಐ. ವಿಶೇಷ ಕೇಡರ್ ಅಧಿಕಾರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿದೆ.


ಒಪ್ಪಂದದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹುದ್ದೆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.


ಹುದ್ದೆ : ವಿಶೇಷ ಕೇಡರ್ ಅಧಿಕಾರಿ (ಉಪ ಮ್ಯಾನೇಜರ್, ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್, ಪ್ರೊಡಕ್ಟ್ ಹೆಡ್)

ಬ್ಯಾಂಕ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಹುದ್ದೆ ಸಂಖ್ಯೆ : 31

ಶಿಕ್ಷಣ ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ/ಸ್ನಾತಕೋತ್ತರ ಪದವಿ

ವಯಸ್ಸಿನ ಮಿತಿ : ಬೇರೆ ಬೇರೆ ಹುದ್ದೆಗೆ ವಯಸ್ಸಿನ ಮಿತಿ ಬೇರೆ ಬೇರೆಯಿದ್ದು, ವೆಬ್ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ : ಆಸಕ್ತ ಅಭ್ಯರ್ಥಿಗಳು ಜನವರಿ 9 ರಿಂದ ಜನವರಿ 31 ರವರೆಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ : ಸಂದರ್ಶನದ ಮೂಲಕ ಆಯ್ಕೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಪ್ಪು ಕಾಗದಕ್ಕೆ ಲಿಕ್ವಿಡ್ ಹಾಕಿದ್ರೆ ನೈಜ ನೋಟಾಗುತ್ತೆ ಎಂದ ವಂಚಕರು ಅರೆಸ್ಟ್