ಕೆಜಿಎಫ್ ಗೆ ತಡೆ ಅರ್ಜಿ ಸಲ್ಲಿಸಿದ್ದ ವೆಂಕಟೇಶ್ ಬಳಿಕ ಉಲ್ಟಾ ಹೊಡೆದಿದ್ದೇಕೆ?

ಶನಿವಾರ, 22 ಡಿಸೆಂಬರ್ 2018 (09:42 IST)
ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್ ಬಿಡುಗಡೆಗೆ ಹಿಂದಿನ ದಿನ ನ್ಯಾಯಾಲಯಕ್ಕೆ ತಡೆ ಅರ್ಜಿ ಸಲ್ಲಿಸಿ ಅದರಲ್ಲಿ ಸಫಲರಾಗಿದ್ದ ದೂರುದಾರ ವೆಂಕಟೇಶ್ ಬಳಿಕ ಉಲ್ಟಾ ಹೊಡೆದಿದ್ದಾರೆ.


ನಿಗದಿತ ಸಮಯಕ್ಕೆ ನಿರ್ಮಾಪಕರ ಕೈಗೆ ತಡೆ ಅರ್ಜಿ ಸೇರದ ಕಾರಣ ಕೆಜಿಎಫ್ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದಂತೇ ಇದೀಗ ದೂರುದಾರ ವೆಂಕಟೇಶ್ ತಮ್ಮ ಅರ್ಜಿ ಹಿಂಪಡೆದಿದ್ದಾರೆ.

ಜತೆಗೆ ತನಗೆ ಮಾಹಿತಿ ಕೊರತೆಯಿಂದಾಗಿ ಕೆಜಿಎಫ್ ಕತೆಗೂ ತಾನು ದೂರಿನಲ್ಲಿ ಹೇಳಿದ ತಂಗಂ ಕತೆಗೂ ಸಂಬಂಧವಿಲ್ಲ ಎಂಬುದು ಈಗ ಗೊತ್ತಾಗಿದೆ. ಅದಕ್ಕೆ ಅರ್ಜಿ ಹಿಂಪಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸುಖಾಸುಮ್ಮನೇ ಚಿತ್ರ ಬಿಡುಗಡೆಗೆ ಮೊದಲು ಗೊಂದಲ ಸೃಷ್ಟಿಗೆ ಕಾರಣರಾದ ವೆಂಕಟೇಶ್ ವಿರುದ್ಧ ಯಶ್ ಅಭಿಮಾನಿಗಳು ಗರಂ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಮೂರು ಕಾರಣಕ್ಕೆ ಕೆಜಿಎಫ್ ನೋಡಲೇಬೇಕು