Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಹೊಸ ಸಿನಿಮಾ ಟೈಟಲ್ ನೋಡಿಯೇ ಕನ್ ಫ್ಯೂಸ್ ಆದ ಪ್ರೇಕ್ಷಕ

ಕಿಚ್ಚ ಸುದೀಪ್ ಹೊಸ ಸಿನಿಮಾ ಟೈಟಲ್ ನೋಡಿಯೇ ಕನ್ ಫ್ಯೂಸ್ ಆದ ಪ್ರೇಕ್ಷಕ
ಬೆಂಗಳೂರು , ಶುಕ್ರವಾರ, 21 ಡಿಸೆಂಬರ್ 2018 (10:11 IST)
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪ್ರತಿಬಾವಂತ ಯುವ ನಿರ್ದೇಶಕ ಅನೂಪ್ ಭಂಡಾರಿ ಜತೆಯಾಗಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂಬ ಸುದ್ದಿ ಓದಿರುತ್ತೀರಿ. ಇದೀಗ ಇವರ ಸಿನಿಮಾದ ಫಸ್ಟ್ ಲುಕ್ ನಿನ್ನೆ ಬಿಡುಗಡೆಯಾಗಿದ್ದು, ಟೈಟಲ್ ನೋಡಿ ಪ್ರೇಕ್ಷಕರ ತಲೆಯಲ್ಲಿ ಹಲವು ಅನುಮಾನ ಹುಟ್ಟಿಕೊಂಡಿದೆ.


ಗುರುವಾರ ಸಿನಿಮಾ ಬಗ್ಗೆ ಡೀಟೈಲ್ ಕೊಡ್ತೀನಿ ಎಂದು ಟ್ವೀಟ್ ಮಾಡಿದ್ದ ಕಿಚ್ಚ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ ‘ಬಿಲ್ಲಾ ರಂಗ ಭಾಷ’ ಎಂದು. ಈ ಟೈಟಲ್ ನೋಡಿಯೇ ಅಭಿಮಾನಿಗಳು ಏನಿದು ಎಂದು ತಲೆಕೆಡಿಸಿಕೊಂಡಿದ್ದಾರೆ.

ಟೈಟಲ್ಲೇ ಇಷ್ಟು ಇಂಟರೆಸ್ಟಿಂಗ್ ಆಗಿದೆ. ಸಿನಿಮಾ ಸೂಪರ್ ಹಿಟ್ ಆಗುತ್ತೆ ಬಿಡಿ ಎಂದು ಕಿಚ್ಚನಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇದರಲ್ಲಿ ಕಿಚ್ಚ ತ್ರಿಬಲ್ ರೋಲ್ ಮಾಡ್ತಿದ್ದಾರಾ? ಮೂವರು ಲೀಡಿಂಗ್ ಕ್ಯಾರೆಕ್ಟರ್ ಗಳ ಹೆಸರಾ? ಇದರ ಅರ್ಥ ಏನು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಆದರೆ ಇದೊಂದು ಥ್ರಿಲ್ಲರ್, ಅಡ್ವೆಂಚರ್ ಕತೆಯಾಗಿದ್ದು, ಇದರ ಟೈಟಲ್ ಹಿಂದಿರುವ ವಿವರವನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
webdunia






















 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ರಿಲೀಸ್ ಆದ ಬೆನ್ನಲ್ಲೇ ಪತಿ ಯಶ್ ಗೆ ರಾಧಿಕಾ ಪಂಡಿತ್ ಕೊಟ್ಟ ಆ ಸ್ವೀಟ್ ಮೆಸೇಜ್ ಏನು ಗೊತ್ತಾ?!