ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ ಎಸ್ ಮೂರ್ತಿ

ಬುಧವಾರ, 12 ಡಿಸೆಂಬರ್ 2018 (10:06 IST)
ಬೆಂಗಳೂರು : ಸ್ಪೀಕರ್ ರಮೇಶ್ ಕುಮಾರ್ ಅವರ  ವಿರುದ್ಧ ವಿಧಾನಸಭೆ ಕಾರ್ಯದರ್ಶಿ ಎಸ್ ಮೂರ್ತಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.


ಅಗಸ್ಟ್ 30, 2018 ರ ರಂದು ವಿಧಾನಸಭೆ ಕಾರ್ಯದರ್ಶಿಯ ಆಡಳಿತಾತ್ಮಕ ಕರ್ತವ್ಯಗಳನ್ನು ಮೊಟುಕುಗೊಳಿಸಿ ಆಡಳಿತಾತ್ಮಕ ಕಡತಗಳನ್ನು ಸ್ಪೀಕರ್ ಕಚೇರಿ ಅಧಿಕಾರಿಗಳಿಗೆ ನೀಡಲು ಸೂಚಿಸಿ ಆದೇಶಿಸಲಾಗಿತ್ತು. ಆದರೆ ರಮೇಶ್ ಕುಮಾರ್ ಆದೇಶ ಕಾನೂನು ಬಾಹಿರವಾಗಿದೆ ಎನ್ನಲಾಗುತ್ತಿದೆ.


ಆಡಳಿತಾತ್ಮಕ ಕಡತಗಳನ್ನು ಸ್ಪೀಕರ್ ಕಚೇರಿಗೆ ನೀಡುವಂತೆ ನಿಯಮ ಉಲ್ಲಂಘಿಸಿದ್ದಾರೆ. ಅವರ ಅಧಿಕಾರ ವ್ಯಾಪ್ತಿ ಮೀರಿ ಆದೇಶ ಹೊರಡಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಈ ಆದೇಶ ಮಾಡಲು ಸ್ಪಿಕರ್ ಗೆ ಅಧಿಕಾರವಿಲ್ಲ. ಸ್ಪೀಕರ್ ಆದೇಶ ರದ್ದುಗೊಳಿಸುವಂತೆ ಕೋರಿ ಎಸ್ ಮೂರ್ತಿ ಅವರು ಮಂಗಳವಾರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇತ್ಯಾರ್ಥವಾಗುವವರೆಗೂ ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದೂ ಮಧ್ಯಾಂತರ ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ರೈತರ ಸಾಲ ಮನ್ನಾ ಮಾಡಲು ಮುಂದಾದ ಕೇಂದ್ರ ಸರ್ಕಾರ