ಸುಟ್ಟ ಗಾಯದ ಜೊತೆಗೆ ಅದರ ಕಲೆಯು ಬೇಗ ವಾಸಿಯಾಗಬೇಕಾ?ಹಾಗಾದ್ರೆ ಈ ಮನೆಮದ್ದನ್ನು ಬಳಸಿ

ಬುಧವಾರ, 12 ಡಿಸೆಂಬರ್ 2018 (07:15 IST)
ಬೆಂಗಳೂರು : ಸುಟ್ಟಗಾಯಗಳಾದಾಗ  ಅದರ ಗಾಯಕ್ಕೆ ಆಯಿಂಟ್ ಮೆಂಟ್ , ಬರ್ನಲ್ ಹಚ್ಚುವ ಬದಲು ಮನೆಯಲ್ಲೇ ಸಿಗುವ ವಸ್ತುಗಳಿಂದಲ್ಲೇ ಮದ್ದನ್ನು ತಯಾರಿಸಿ ಹಚ್ಚಿದರೆ ಬೇಗ ಗಾಯ ವಾಸಿಯಾಗುವುದರ ಜೊತೆಗೆ ಅದರ ಕಲೆಯು ಕೂಡ ವಾಸಿಯಾಗುತ್ತದೆ.


ಮೆಂತೆ ಕಾಳನ್ನು ಪುಡಿ ಮಾಡಿಕೊಂಡು ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್ ನ್ನು ಸುಟ್ಟ ಗಾಯಕ್ಕೆ ಹಚ್ಚಿ. ಹೀಗೆ ದಿನಕ್ಕೆ 3-4 ಸಲ ಹಚ್ಚಿದರೆ ಬೇಗ  ಬೇಗ ಗಾಯ ವಾಸಿಯಾಗುವುದರ ಜೊತೆಗೆ ಅದರ ಕಲೆಯು ಕೂಡ ಇರುವುದಿಲ್ಲ.
ಕೊಬ್ಬರಿ ಎಣ್ಣೆ ಹಾಗೂ ಎಳ್ಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಸುಟ್ಟ ಗಾಯಕ್ಕೆ ಹಚ್ಚಿ. ಹೀಗೆ ದಿನಕ್ಕೆ 3-4 ಸಲ ಹಚ್ಚಿದರೆ ಬೇಗ  ಬೇಗ ಗಾಯ ವಾಸಿಯಾಗುವುದರ ಜೊತೆಗೆ ಅದರ ಕಲೆಯು ಕೂಡ ಆಗಲ್ಲ.


ಶುದ್ಧವಾದ ಜೇನು ತುಪ್ಪ ಸುಟ್ಟ ಗಾಯಕ್ಕೆ ಹಚ್ಚಿದರೆ ತುಂಬಾ ಬೇಗ ಗಾಯ ವಾಸಿಯಾಗುತ್ತದೆ. ಅಲೊವೆರಾ ಜೆಲ್ ಹಚ್ಚುವುದರಿಂದಲೂ ಸುಟ್ಟ ಗಾಯ ಬೇಗ ವಾಸಿಯಾಗುತ್ತದೆ. ಹಾಗೇ ಆಲೂಗಡ್ಡೆ ಪೇಸ್ಟ್ ಮಾಡಿ ಹಚ್ಚುವುದರಿಂದಲೂ ಸುಟ್ಟ ಗಾಯ ಬೇಗ ವಾಸಿಯಾಗುತ್ತದೆ. ಇವೆಲ್ಲಾವನ್ನು ದಿನಕ್ಕೆ 3-4 ಸಲ ಹಚ್ಚಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉರಿಮೂತ್ರ ಸಮಸ್ಯೆಗೆ ಇದು ಸೂಪರ್ ಮನೆಮದ್ದು