Select Your Language

Notifications

webdunia
webdunia
webdunia
webdunia

ಶುಕ್ರವಾರದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

ಶುಕ್ರವಾರದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ
ಬೆಂಗಳೂರು , ಮಂಗಳವಾರ, 11 ಡಿಸೆಂಬರ್ 2018 (07:52 IST)
ಬೆಂಗಳೂರು : ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಗೆ ಶುಕ್ರವಾರ ತುಂಬಾ ಇಷ್ಟವಾದ ದಿನ. ಇಂತಹ ಪುಣ್ಯವಾದ ದಿನದಂದು ಕೆಲವೊಂದು ಕೆಲಸಗಳನ್ನು ಮಾಡಬಾರದು. ಹಾಗೇ ಮಾಡಿದರೆ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸುತ್ತಾಳೆ. ಆ ಕೆಲಸಗಳು ಯಾವುದೆಬುದನ್ನು ಮೊದಲು ತಿಳಿಯೋಣ.


ಶುಕ್ರವಾರದ ದಿನ ಮಹಿಳೆಯರು ಕಪ್ಪು ಬಣ್ಣದ ವಸ್ತ್ರಗಳನ್ನು, ಕಪ್ಪು ಬಣ್ಣದ ಬಳೆಗಳನ್ನು ಧರಿಸಬಾರದು. ಹಾಗೇ ಕಪ್ಪು ಬಣ್ಣದ ಕುಂಕುಮವನ್ನು ಸಹ ದಾರಣೆ ಮಾಡಬಾರದು. ಅಲ್ಲದೇ ಕಪ್ಪು ಬಣ್ಣದ ಬಳೆ ಹಾಗೂ ವಸ್ತ್ರವನ್ನು ಖರೀದಿಸಬಾರದು. ಶುಕ್ರವಾರದ ದಿನ ಯಾರಾದರೂ ಮುತ್ತೈದೆಯರು ಮನೆಗೆ ಬಂದರೆ ತಪ್ಪದೇ ಅವರಿಗೆ ಕುಂಕುಮವನ್ನು ಕೊಡದೆ ಕಳುಹಿಸಬಾರದು. ಹಾಗೇ ಅಂದು ಸ್ತ್ರೀಯರು ಕುಂಕುಮ ಧಾರಣೆ ಮಾಡದೆ ಇರಬಾರದು.


ಶುಕ್ರವಾರದ ದಿನ ಅಶ್ವಥ ಮರವನ್ನು ಮುಟ್ಟಬಾರದು. ಹಾಗೇಯೇ ಅದರ ಎಲೆಗಳನ್ನು ಕೀಳಬಾರದು. ಶುಕ್ರವಾರದಂದು ಮಹಿಳೆಯರು ಅರಿಶಿನ ಹಚ್ಚಿಕೊಂಡು ಸ್ನಾನ ಮಾಡಿದರೆ ಉತ್ತಮ. ಶುಕ್ರವಾರದಂದು ಲಕ್ಷ್ಮೀದೇವಿಗೆ  ಇಷ್ಟವಾದ ಅರಿಶಿನ, ಕೆಂಪು ಹಸಿರು ಬಣ್ಣದ ವಸ್ತ್ರ, ಬಳೆ ಧರಿಸಿದರೆ ಒಳ್ಳೆಯದು. ಹಾಗೇ ಈ ದಿನ ತುಳಸಿ ಗಿಡಕ್ಕೆ ತಪ್ಪದೇ ನೀರನ್ನು ಹಾಕಬೇಕು. ಎಳ್ಳೆಣೆ ಅಥವಾ ಹಸುವಿನ ತುಪ್ಪದಿಂದ ಲಕ್ಷ್ಮೀಗೆ ಪೂಜೆ ಮಾಡಬೇಕು.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೆನಪಿರಲಿ! ಪೂಜೆಯ ಜೊತೆಗೆ ಪೂಜೆಗೆ ಬಳಸುವ ಈ ಸಾಮಾಗ್ರಿಗಳು ಯಾವಾಗಲೂ ಶುದ್ಧವಾಗಿರಲಿ