ಬೆಂಗಳೂರು : ಕೆಲವರ ತಲೆಯಲ್ಲಿ ಹೇನು, ಸೀರು ಹೆಚ್ಚಾಗಿರುತ್ತದೆ. ಇದರಿಂದ ತಲೆಯಲ್ಲಿ ಹೇನು ಕಚ್ಚಿ ಗಾಯಗಳಾಗುವ ಸಂಭವವಿರುತ್ತದೆ. ಅಲ್ಲದೇ ಇದು ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಸೀತಾಫಲ ಮರದ ಎಲೆಯನ್ನು ತಂದು ಕ್ಲೀನ್ ಮಾಡಿ ಅದರಿಂದ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ತಲೆಯ ಬುಡಕ್ಕೆ ಹಚ್ಚಬೇಕು. ಅರ್ಧಗಂಟೆ ಬಿಟ್ಟು ಹರ್ಬಲ್ ಶಾಂಪುವಿನಿಂದ ತೊಳೆಯಿರಿ. ಇದನ್ನು ವಾರಕ್ಕೆ ಮೂರು ಸಲ ಮಾಡಿ. ಹೀಗೆ ಮಾಡುವುದರಿಂದ ಎರಡೇ ವಾರದಲ್ಲಿ ನಿಮ್ಮ ತಲೆಹೊಟ್ಟು, ಹೇನು, ಸೀರು ಕಡಿಮೆಯಾಗುತ್ತದೆ. ಆದರೆ ಈ ಪೇಸ್ಟ್ ನ್ನು ತಲೆಗೆ ಹಚ್ಚುವಾಗ ತಲೆಗೆ ಎಣ್ಣೆ ಹಚ್ಚಿರಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.