Publish Date: Sat, 08 Dec 2018 (13:09 IST)
Updated Date: Sat, 08 Dec 2018 (13:10 IST)
ಬೆಂಗಳೂರು : ಕೆಟ್ಟ ಚಟ ಬಿಡು ಎಂದು ಬುದ್ದಿ ಹೇಳಿದ ಹೆತ್ತ ತಾಯಿಗೆ ಪಾಪಿ ಮಗನೊಬ್ಬ ಪೊರಕೆಯಿಂದ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.
ಜೀವನ್ (19) ಹೆತ್ತ ತಾಯಿಗೆ ಪೊರಕೆಯಿಂದ ಹೊಡೆದ ಪಾಪಿ ಮಗ. ಜೀವನ್ ತನ್ನ ತಾಯಿಯ ಎದುರೇ ಸಿಗರೇಟ್ ಸೇದುತ್ತಾನಂತೆ. ಅಷ್ಟೇ ಅಲ್ಲದೇ ಅಪ್ರಾಪ್ತಳ ಜೊತೆಗೆ ಲವ್ ಮಾಡುತ್ತಿದ್ದನಂತೆ, ಈ ವಿಷಯಕ್ಕೆ ಸಂಬಂಧಫಟ್ಟಂತೆ ಜೀವನ್ ತಾಯಿ ಆತನಿಗೆ ಬುದ್ದಿ ಹೇಳಿದ್ದಾರೆ.
ಇದರಿಂದ ಕೋಪಗೊಂಡ ಜೀವನ್ ಪೊರಕೆ ಹಿಡಿದುಕೊಂಡು ತಾಯಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ “ನನ್ನ ವಿಚಾರಕ್ಕೆ ಬಂದ್ರೆ ಇದೇ ತರಾ ಟ್ರೀಟ್ಮೆಂಟ್ ಕೋಡ್ತೀನಿ” ಎಂದು ಬೆದರಿಸಿದ್ದಾನೆ. ಮಗನ ವರ್ತನೆಯಿಂದ ಬೇಸರಗೊಂಡ ತಾಯಿ ಇದೀಗ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
pavithra
Publish Date: Sat, 08 Dec 2018 (13:09 IST)
Updated Date: Sat, 08 Dec 2018 (13:10 IST)