Publish Date: Sat, 08 Dec 2018 (13:01 IST)
Updated Date: Sat, 08 Dec 2018 (13:04 IST)
ಗದಗ : ಪ್ರೇಯಸಿಯ ಜೊತೆ ಸೇರಿ ಮಗ ನೊಬ್ಬ ಹೆತ್ತ ತಾಯಿಗೆ ಹಿಗ್ಗಾಮಗ್ಗಾ ಥಳಿಸಿ ಕಾಲುಗಳನ್ನೇ ಮುರಿದ ಘಟನೆ ಗದಗ ನಗರದ ಎಸ್.ಎಂ ಕೃಷ್ಣಾ ನಗರದಲ್ಲಿ ನಡೆದಿದೆ.
ಸಿದ್ದಲಿಂಗಯ್ಯ ನಾಗಾವಿಮಠ ತನ್ನ ಪ್ರೇಯಸಿ ಜೊತೆ ಸೇರಿಕೊಂಡು ಹೆತ್ತ ತಾಯಿಯನ್ನೇ ಥಳಿಸಿದ ಪಾಪಿ. ಪ್ರೇಮವ್ವ ಮಗನಿಂದ ಥಳಿತಕ್ಕೊಳಗಾದ ದುರ್ದೈವಿ ತಾಯಿ. ಇದೀಗ ವೃದ್ಧೆ ತಾಯಿ ಪ್ರೇಮವ್ವ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ನಡೆದು ನಾಲ್ಕು ದಿನಗಳಾಗಿದ್ದು, ಈಗಾಗಲೇ ವೃದ್ಧೆ ಪ್ರೇಮವ್ವ ದೂರನ್ನು ನೀಡಿದ್ದಾರೆ. ಆದರೆ ಪೊಲೀಸರು ಪುತ್ರ ಹಾಗೂ ಪ್ರೇಯಸಿಯನ್ನು ಬಂಧಿಸದೇ ವೃದ್ಧೆಯ ಜೊತೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.