Select Your Language

Notifications

webdunia
webdunia
webdunia
Thursday, 10 April 2025
webdunia

18 ದಿನದ ಹಸುಗೂಸನ್ನು ಹೆತ್ತಮ್ಮನೇ ಕೊಂದಿದ್ದೇಕೆ?!

ತಾಯಿ-ಮಗು
ಚೆನ್ನೈ , ಶುಕ್ರವಾರ, 30 ನವೆಂಬರ್ 2018 (08:52 IST)
ಚೆನ್ನೈ: ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರುತ್ತಾರೆಯೇ ಹೊರತು, ಕೆಟ್ಟ ತಾಯಿ ಇರಲ್ಲ ಎಂಬ ಮಾತಿಗೆ ಅಪವಾದವಾಗಿ ನಡೆದುಕೊಂಡಿದ್ದಾಳೆ ಈ ತಾಯಿ.


18 ದಿನದ ಹಸುಗೂಸನ್ನು ಕೈಯಾರೆ ಕೊಂದು ಅನಾರೋಗ್ಯದಿಂದ ಸತ್ತಿತೆಂದು ನಾಟಕವಾಡಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. 15 ದಿನದ ಹಿಂದೆ ಈ ಘಟನೆ ನಡೆದಿದ್ದು, ಪೊಲೀಸರು ಈಗ ನಿಜಾಂಶ ಪತ್ತೆ ಮಾಡಿದ್ದಾರೆ.

ಚೆನ್ನೈಯಲ್ಲಿ ಈ ಘಟನೆ ನಡೆದಿದೆ. ಮೊದಲೇ ಒಂದೂವರೆ ವರ್ಷದ ಹೆಣ್ಣು ಮಗುವಿನ ತಾಯಿಯಾಗಿರುವ ಈಕೆ ಎರಡನೇ ಬಾರಿಗೂ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾಳೆ. ಈ ವಿಚಾರವಾಗಿ ಗಂಡ ತನ್ನಲ್ಲಿ ಜಗಳವಾಡುತ್ತಿದ್ದ. ಆತನಿಗೆ ಮೊದಲೇ ಬೇರೊಂದು ಮದುವೆಯಾಗಿ ಅದರಲ್ಲೂ ಹೆಣ್ಣು ಮಗುವಿತ್ತು. ಆದರೆ ಈ ವಿಚಾರವನ್ನು ಮುಚ್ಚಿಟ್ಟಿದ್ದ. ಈಗ ಮತ್ತೊಂದು ಹೆಣ್ಣು ಮಗುವೇ ಆಯಿತೆಂದು ತನ್ನ ಜತೆ ಜಗಳವಾಡುತ್ತಿದ್ದ.

ಇದೇ ಕಾರಣಕ್ಕೆ ಈ ಮಗುವಿನ ತಲೆಯನ್ನು ನೆಲಕ್ಕೆ ಹೊಡೆದು ಸಾಯಿಸಿದೆ ಎಂದು ಆರೋಪಿ ತಾಯಿ ಬಾಯ್ಬಿಟ್ಟಿದ್ದಾಳೆ. ಕೃತ್ಯವೆಸಗಿದ ನಂತರ ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತನ್ನ ಮಗು ಹಾಲು ಕುಡಿಯುತ್ತಿಲ್ಲ ಎಂದು ನಾಟಕವಾಡಿದ್ದಾಳೆ. ಆದರೆ ಅಷ್ಟರಲ್ಲೇ ಮಗು ಸಾವನ್ನಪ್ಪಿತ್ತು. ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರಿಂದ ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಾವಿಗೆ ನಿಖರ ಕಾರಣ ತಿಳಿಸಿದಾಗ ಸತ್ಯ ಬಯಲಿಗೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ