ಅಂಬಾನಿ ಮಗಳ ಮದುವೆಯಲ್ಲಿ ಇಂದ್ರನ ಐಭೋಗ!

ಶನಿವಾರ, 8 ಡಿಸೆಂಬರ್ 2018 (10:34 IST)
ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿಯ ಮದುವೆಯ ಸಂಭ್ರಮ ಈಗಾಗಲೇ ಕಳೆಗಟ್ಟಿದ್ದು, ಉದಯಪುರದಲ್ಲಿ ಮೂರು ದಿನಗಳ ಕಾಲ ಪ್ರಿ ವೆಡ್ಡಿಂಗ್ ಪಾರ್ಟಿ ನಡೆಯುತ್ತಿದೆ.


ಡಿಸೆಂಬರ್ 7 ರಿಂದ 10 ರವರೆಗೆ ಪ್ರಿ ವೆಡ್ಡಿಂಗ್ ಪಾರ್ಟಿ ನಡೆಯುತ್ತಿದ್ದು, ಬಾಲಿವುಡ್ ತಾರೆಗಳ ದಂಡೇ ಹರಿದುಬರುತ್ತಿದೆ. ಡಿಸೆಂಬರ್ 12 ರಂದು ಇಶಾ ಪಿರಾಮಿಲ್ ಗ್ರೂಪ್ ಆಫ್ ಕಂಪನಿ ಒಡೆಯ ಅಜಯ್ ಪಿರಾಮಿಲ್ ಪುತ್ರ ಆನಂದ್ ಜತೆಗೆ ಹಸೆಮಣೆ ಏರಲಿದ್ದಾರೆ. ಈ ಸಮಾರಂಭ ಮುಂಬೈಯಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ನಡೆಯಲಿರುವ ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ಮೂರು ದಿನ, ಮೂರು ಬಾರಿ ಸುಮಾರು 5000 ಕ್ಕೂ ಹೆಚ್ಚು ಮಂದಿಗೆ ಅನ್ನ ದಾನ ಕಾರ್ಯಕ್ರಮ ನಡೆಯಲಿದೆ ಎಂದು ಅಂಬಾನಿ ಕುಟುಂಬ ಮೂಲಗಳು ತಿಳಿಸಿವೆ.

ಮದುವೆಗೆ ಮೊದಲು ನಡೆಯಲಿರುವ ಈ ಪಾರ್ಟಿಗೆ ಬಾಲಿವುಡ್ ನಟರಾದ ಅನಿಲ್ ಕಪೂರ್, ನಿರ್ಮಾಪಕ ಡೇವಿಡ್ ಧವನ್ ಮುಂತಾದವರು ಈಗಾಗಲೇ ಪತ್ನಿ ಸಮೇತರಾಗಿ ಉದಯಪುರಕ್ಕೆ ಬಂದಿಳಿದಿದ್ದಾರೆ. ಇತ್ತೀಚೆಗಷ್ಟೇ ವಿವಾಹವಾದ ಪ್ರಿಯಾಂಕ ಚೋಪ್ರಾ ದಂಪತಿ ಕೂಡಾ ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ. ಡಿಸೈನರ್ ಮನೀಶ್ ಮಲ್ಹೋತ್ರಾ ಈಗಾಗಲೇ ಇಲ್ಲಿ ಬೀಡುಬಿಟ್ಟಿದ್ದು, ಮದುಮಗಳು ಇಶಾ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾವಿಗೂ ಮೊದಲು ಯಶ್-ರಾಧಿಕಾ ಮಗುವಿಗೆ ಅಂಬರೀಶ್ ನೀಡಿದ್ದ ಸರ್ಪ್ರೈಸ್ ಏನು ಗೊತ್ತಾ?!