ವಿಚ್ಛೇದನ ಅರ್ಜಿ ಹಿಂಪಡೆದು ಅಚ್ಚರಿ ಮೂಡಿಸಿದ ಲಾಲೂ ಯಾದವ್ ಪುತ್ರ

ಶುಕ್ರವಾರ, 30 ನವೆಂಬರ್ 2018 (08:58 IST)
ಪಾಟ್ನಾ: ಮದುವೆಯಾಗಿ ಆರೇ ತಿಂಗಳಿಗೆ ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿ ಶಾಕ್ ನೀಡಿದ್ದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಈಗ ಮತ್ತೊಂದು ಶಾಕ್ ನೀಡಿದ್ದಾರೆ.


ತೇಜ್ ಪ್ರತಾಪ್ ಯಾದವ್ ನಿರ್ಧಾರದಿಂದ ಲಾಲೂ ಯಾದವ್ ಸೇರಿದಂತೆ ಕುಟುಂಬವೇ ಬೇಸರದಲ್ಲಿತ್ತು. ಪತ್ನಿ ಐಶ್ವರ್ಯಾ ರೈ ಜತೆ ಹೊಂದಿಕೊಂಡು ಹೋಗುವಂತೆ ಕುಟುಂಬದವರು ಎಷ್ಟೇ ಹೇಳಿದರೂ ತೇಜ್ ಕಿವಿಗೊಟ್ಟಿರಲಿಲ್ಲ.

ಇದೀಗ ಇದ್ದಕ್ಕಿದ್ದ ಹಾಗೆ ವಿಚ್ಛೇದನ ಅರ್ಜಿಯನ್ನು ಹಿಂಪಡೆದು ಅಚ್ಚರಿ ಮೂಡಿಸಿದ್ದಾರೆ. ಹೊಂದಾಣಿಕೆ ಕೊರತೆಯಿದ್ದು, ನಮ್ಮಿಬ್ಬರ ಮನಸ್ಥಿತಿ ಬೇರೆ. ಯಾವುದೇ ಕಾರಣಕ್ಕೂ ಒಟ್ಟಾಗಿ ಬಾಳಲು ಸಾಧ್ಯವಿಲ್ಲ ಎಂದಿದ್ದ ತೇಜ್ ಪ್ರತಾಪ್ ಇದೀಗ ದಿಡೀರ್ ಆಗಿ ವಿಚ್ಛೇದನ ಅರ್ಜಿ ಹಿಂಪಡೆಯಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 18 ದಿನದ ಹಸುಗೂಸನ್ನು ಹೆತ್ತಮ್ಮನೇ ಕೊಂದಿದ್ದೇಕೆ?!