Select Your Language

Notifications

webdunia
webdunia
webdunia
webdunia

ವಿಚ್ಛೇದನಕ್ಕಾಗಿ ಕುಟುಂಬದವರ ಜತೆಯೇ ಲಾಲೂ ಪ್ರಸಾದ್ ಪುತ್ರ ತೇಜ್ ಪ್ರತಾಪ್ ರಂಪಾಟ

ವಿಚ್ಛೇದನಕ್ಕಾಗಿ ಕುಟುಂಬದವರ ಜತೆಯೇ ಲಾಲೂ ಪ್ರಸಾದ್ ಪುತ್ರ ತೇಜ್ ಪ್ರತಾಪ್ ರಂಪಾಟ
ಪಾಟ್ನಾ , ಭಾನುವಾರ, 11 ನವೆಂಬರ್ 2018 (09:42 IST)
ಪಾಟ್ನಾ: ಮದುವೆಯಾದ ಆರೇ ತಿಂಗಳಿಗೆ ಪತ್ನಿ ಐಶ್ವರ್ಯಾ ರೈಗೆ ವಿಚ್ಛೇದನ ನೀಡಲು ಮುಂದಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಇದೀಗ ವಿಚ್ಛೇದನಕ್ಕಾಗಿ ಪಟ್ಟು ಹಿಡಿದು ಕೂತಿದ್ದಾರೆ.

ಪತ್ನಿಗೆ ವಿಚ್ಛೇದನ ನೀಡುವ ತಮ್ಮ ನಿರ್ಧಾರವನ್ನು ಬೆಂಬಲಿಸದಿದ್ದರೆ ಮನೆಗೇ ಬರುವುದಿಲ್ಲ ಎಂದು ತೇಜ್ ಪ್ರತಾಪ್ ರಂಪಾಟ ಮಾಡುತ್ತಿದ್ದು, ಹೋಟೆಲ್ ಒಂದರಲ್ಲಿ ತಂಗಿದ್ದಾರೆ ಎನ್ನಲಾಗಿದೆ.

ನನ್ನ ಹಾಗೂ ಐಶ್ವರ್ಯಾ ನಡುವಿನ ಬಿರುಕು ಮರಳಿ ಸರಿಪಡಿಸಲಾಗದ್ದು. ಹೀಗಾಗಿ ನನಗೆ ವಿಚ್ಛೇದನ ಬೇಕೇ ಬೇಕು. ಇದನ್ನು ಬೆಂಬಲಿಸುವವರೆಗೆ ನಾನು ಮನೆಗೆ ಮರಳುವುದಿಲ್ಲ ಎಂದು ತೇಜ್ ಪ್ರತಾಪ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬೇಡಿಕೆ ಮುಂದಿಟ್ಟಿದ್ದಾರೆ.

ಆದರೆ ತೇಜ್ ಪ್ರತಾಪ್ ನಿರ್ಧಾರದ ಬಗ್ಗೆ ಕುಟುಂಬದವರಲ್ಲಿ ಅಸಮಾಧಾನವಿದೆ ಎನ್ನಲಾಗಿದೆ. ಈ ನಡುವೆ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದ ನಿಮಿತ್ತ ರಾಂಚಿಯ ಆಸ್ಪತ್ರೆಯಲ್ಲಿದ್ದು, ಪುತ್ರನ ವೈವಾಹಿಕ ಜೀವನ ಮುರಿದು ಬಿದ್ದ ವಿಚಾರ ಅವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕಿತ್ತಾಟವಾಡಿ ಕೊನೆಗೆ ಬಾಯ್ ಫ್ರೆಂಡ್ ಮರ್ಮಾಂಗಕ್ಕೇ ಕತ್ತರಿ ಹಾಕಿದ ವಿವಾಹಿತ ಮಹಿಳೆ