Publish Date: Sat, 22 Dec 2018 (14:17 IST)
Updated Date: Sat, 22 Dec 2018 (14:19 IST)
ಬೇಡಿಕೆ ಈಡೇರಿಕೆಗೆ ಆಗ್ರಹ ಮಾಡಿ ಪೌರ ಕಾರ್ಮಿಕರು ಮುಂದುವರಿಸಿರುವ ಧರಣಿ ಮುಂದುವರಿದಿದೆ.
ಮೂರನೇ ದಿನವೂ ಮುಂದುವರೆದ ಪೌರ ಕಾರ್ಮಿಕರ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಪೌರ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಚಿಕ್ಕೋಡಿಯ ಚಿಂಚಲಿ ಪಟ್ಟಣ ಪಂಚಾಯತಿಯ ಪೌರ ಕಾರ್ಮಿಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಕಳೆದ ಎರಡು ವರ್ಷದಿಂದ ವೇತನ ಹಾಗೂ ಖಾಯಂಮಾತಿ ಮಾಡದ ಹಿನ್ನಲೆ ಧರಣಿ ಶುರುಮಾಡಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಧರಣಿ ನಡೆಯುತ್ತಿದೆ. ಪೌರ ಕಾರ್ಮಿಕರ ಪ್ರತಿಭಟನೆಗೆ ಬೆಂಬಲವನ್ನು ಪಟ್ಟಣ ಪಂಚಾಯತ ಸದಸ್ಯರು ಸೂಚಿಸಿದ್ದಾರೆ.