Publish Date: Sat, 22 Dec 2018 (14:04 IST)
Updated Date: Sat, 22 Dec 2018 (14:06 IST)
ಕೋಲಾರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನು ಗೆದ್ದಿದ್ದೇವೆ. ಆದರೂ ಸಚಿವ ಸ್ಥಾನ ನೀಡದಿರುವುದು ದುರದೃಷ್ಟಕರ ಎಂದು ಸಂಸದ ಕೆ.ಹೆಚ್.ಮುನಿಯಪ್ಪ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಂಸದ ಕೆ.ಹೆಚ್. ಮುನಿಯಪ್ಪ ಹೇಳಿಕೆ ನೀಡಿದ್ದು, ಕೋಲಾರ ಕಾಂಗ್ರೆಸ್ ರಾಜ್ಯದಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. ಆದ್ರೆ ಸಚಿವ ಸ್ಥಾನ ಸಿಕ್ಕದೆ ಇರೋದು ದುರದೃಷ್ಟಕರ ಸಂಗತಿ. ನನ್ನ ಮಗಳು ರೂಪ ಈ ಬಾರಿ ಶಾಸಕಿಯಾಗಿದ್ದಾಳೆ. ಸಚಿವ ಸ್ಥಾನ ಪಡೆಯಲು ಇನ್ನೂ ಟೈಂ ಇದೆ ಎಂದರು.
ಜಿಲ್ಲೆಯ ಅನುಗುಣವಾಗಿ ಒಬ್ಬರಿಗೆ ಕೋಲಾರದಲ್ಲಿ ಸಚಿವ ಸ್ಥಾನ ನೀಡಬಹುದಿತ್ತು. ಕೆಪಿಸಿಸಿ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಮಾಡೋಣ ಎಂದಿದ್ದಾರೆ. ವರಿಷ್ಠರು ಲೋಕಸಭಾ ಚುನಾವಣಾ ದೃಷ್ಟಿಯಿಂದ ಪಕ್ಷವನ್ನು ಮೊದಲು ಉತ್ತಮಗೊಳಿಸಿ ಎಂದಿದ್ದಾರೆ. ಹೀಗಾಗಿ ಯಾರು ಕೂಡ ಅಸಮಾಧಾನ ಮಾಡಿಕೊಳ್ಳಬೇಡಿ ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಅಂತಾ ಕೆ.ಹೆಚ್ ಮುನಿಯಪ್ಪ ಹೇಳಿಕೆ ನೀಡಿದ್ದಾರೆ.