Select Your Language

Notifications

webdunia
webdunia
webdunia
webdunia

ಕೇಬಲ್ ಟಿವಿ ಆಪರೇಟರ್ ಗಳಿಂದ ಪ್ರತಿಭಟನೆ

ಕೇಬಲ್ ಟಿವಿ ಆಪರೇಟರ್ ಗಳಿಂದ ಪ್ರತಿಭಟನೆ
ಮೈಸೂರು , ಗುರುವಾರ, 20 ಡಿಸೆಂಬರ್ 2018 (16:43 IST)
ಹೊಸ ವರ್ಷದ ಆರಂಭದ ದಿನದಿಂದ ಕೇಂದ್ರ ಸರ್ಕಾರವು ಏಕಾಏಕಿ ವಿವಿಧ ಛಾನಲ್ಗಳ ಸೇವಾ ದರವನ್ನು ಹೆಚ್ಚಿಸಿರುವುದನ್ನು ಖಂಡಿಸಿ ಕೇಬಲ್ ಟಿವಿ ಆಪರೇಟ್ ರಗಳು ಪ್ರತಿಭಟನೆ ನಡೆಸಿದ್ದಾರೆ.

ಮೈಸೂರು ಜಿಲ್ಲಾ ಕೇಬಲ್ ಟಿ.ವಿ ಆಪರೇಟರ್ಸ್ ವೆಲ್ಫೇರ್ ಅಸೋಸಿಯೇಷನ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ನಿರ್ಣಯದಿಂದಾಗಿ ಗ್ರಾಹಕರಿಗೆ ತೊಂದರೆ ಆಗುತ್ತದೆ.  ಈಗ ಕೇಂದ್ರ ಸರ್ಕಾರ ಛಾನಲ್ ದರ ಏರಿಸುವುದರ ಮೂಲಕ ಅವರ ಆಸೆಗೆ ತಣ್ಣೀರೆರಚುವಂತೆ ಮಾಡಿದೆ. ಕೇಂದ್ರ ಸರ್ಕಾರದ ನಿರ್ಣಯ ಮಲ್ಟಿ ನ್ಯಾಷನಲ್ ಸಂಸ್ಥೆಗಳಿಗೆ ಲಾಭದಾಯಕವಾಗಿದೆಯೇ ಹೊರತು ಸಾಮಾನ್ಯ ಜನತೆಗಲ್ಲ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ದರ ಏರಿಕೆಯು ನಮಗೂ ಹಾಗೂ ಗ್ರಾಹಕರಿಗೆ ಮಾರಕವಾಗಿರುವುದರಿಂದ ದೇಶದ ಬಡಜನತೆಯ ಹಿತಾಸಕ್ತಿಗಳನ್ನು ಕಾಯಲು ಅಶಕ್ತವಾಗಿದ್ದು ಕೂಡಲೇ ಕೇಂದ್ರ ಸರ್ಕಾರ ಕೈಗೊಂಡಿರುವ ಛಾನಲ್ಗಳ ದರ ಏರಿಕೆಯನ್ನು ಕೈಬಿಡುವಂತೆ ಆಗ್ರಹಿಸಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲಿ ಕಳ್ಳತನವಾದ ಕುರಿಗಳೆಷ್ಟು ಗೊತ್ತಾ?