Publish Date: Thu, 20 Dec 2018 (16:32 IST)
Updated Date: Thu, 20 Dec 2018 (16:34 IST)
ಕುರಿಗಳ ಕಳ್ಳತನ ಎಂದರೆ ಒಂದೋ , ಎರಡೋ ಕುರಿಗಳು ಕಳ್ಳತನ ಆಗುವುದು ಸಾಮಾನ್ಯ. ಆದರೆ ಅಲ್ಲಿ ನಡೆದ ಕಳ್ಳತನ ಕುರಿಗಾಯಿಯ ಬದುಕನ್ನೇ ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ.
ಕುರಿಗಾಯಿಯೊಬ್ಬನ ನೂರಕ್ಕೂ ಹೆಚ್ಚು ಕುರಿಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ರಾತ್ರೋರಾತ್ರಿ ದುಷ್ಕರ್ಮಿಗಳು ನೂರಕ್ಕೂ ಹೆಚ್ಚು ಕುರಿಗಳನ್ನು ಕದ್ದೊಯ್ದಿರುವ ಘಟನೆ ಪಾವಗಡ ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಉಪ್ಪಾರಹಳ್ಳಿ ತಾಂಡದ ರಾಮು ನಾಯ್ಕ ಎಂಬುವರಿಗೆ ಸೇರಿದ ಕುರಿಗಳು ಕಳ್ಳತನವಾಗಿದೆ. ಕುರಿ ರೊಪ್ಪದಲ್ಲಿದ್ದ ನೂರಕ್ಕೂ ಹೆಚ್ಚು ಕುರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಈ ಸಂಬಂಧ ತಿರುಮಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.