Select Your Language

Notifications

webdunia
webdunia
webdunia
webdunia

ಆಟೋದಲ್ಲಿ ಬಂದ ನಾಲ್ವರಿಂದ ಟೆಕ್ಕಿ ಯುವಕನ ಮೇಲೆ ಹಲ್ಲೆ

crime news

geetha

bangalore , ಶುಕ್ರವಾರ, 9 ಫೆಬ್ರವರಿ 2024 (14:02 IST)
ಬೆಂಗಳೂರು-ಆಟೋದಲ್ಲಿ ಬಂದ ನಾಲ್ವರಿಂದ ಟೆಕ್ಕಿ ಯುವಕನ ಮೇಲೆ ಹಲ್ಲೆ ಯತ್ನಿಸಿ ಆರೋಪಿಗಳು ಬೈಕ್ ರಾಬರಿ ಮಾಡಲಾಗಿದೆ.ಸ್ನೇಹಿತನಿಗೆ ಡೆಬಿಟ್ ಕಾರ್ಡ್ ಕೊಡಲು  ಟೆಕ್ಕಿ ಇಮ್ಯಾನುಯೆಲ್ ಬಂದಿದ್ದ.ನೆನ್ನೆ ತಡರಾತ್ರಿ 1 ಗಂಟೆ ಸುಮಾರಿಗೆ ಚಂದ್ರಲೇಔಟ್ ನ ಬಿಸಿಸಿ ಲೇಔಟ್ ನಲ್ಲಿ ಘಟನೆ ನಡೆದಿದೆ.
 
ಮೊದಲಿಗೆ ಟೆಕ್ಕಿ ಬಳಿ ಬಂದು ನಾಲ್ವರು  ಅವಾಜ್ ಹಾಕಿದ್ದರು.ತಡರಾತ್ರಿ ಇಲ್ಲಿ ಏನ್ ಮಾಡ್ತಿದ್ದೀಯಾ...?ಯಾರೋ ನೀನು ಬ್ಯಾಗಲ್ಲಿ ಏನಿದೆ ದುಡ್ಡಿದ್ಯಾ ಅಂತ ಅವಾಜ್ ಹಾಕಿ ಆರೋಪಿಗಳು ಚೆಕ್ ಮಾಡಿದ್ದಾರೆ.ನಂತರ ಟೆಕ್ಕಿ ಬಳಿ ಹಣವಿಲ್ಲದಿದ್ದಾಗ ಬೈಕ್ ಕೀ ಕಸಿದು ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ.ಆಟೋ ಹಿಂದೆ ಬೈಕ್ ಕೀ ಗಾಗಿ  ಟೆಕ್ಕಿ ಇಮ್ಯಾನುಯೆಲ್ ಓಡಿದ್ದಾನೆ.ಕಡೆಗೆ ಆಟೋವನ್ನು ಯೂ ಟರ್ನ್ ಮಾಡಿಕೊಂಡು ಬಂದು ಕಳ್ಲರು ಬೈಕ್ ಕದ್ದೊಯ್ದಿದ್ದರು.ಆಟೋದಲ್ಲಿ ಬಂದು ಬೈಕ್ ಕದ್ದೊಯ್ದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
 
ಕೂಡಲೇ ಪೊಲೀಸ್ ಕಂಟ್ರೋಲ್ ರೂಂ ಗೆ  ಟೆಕ್ಕಿ ಇಮ್ಯಾನುಯೆಲ್ ಕರೆ ಮಾಡಿದ್ದ.ನೆನ್ನೆ ತಡರಾತ್ರಿ ಬೈಕ್ ಕಳುವಾಗ್ತಿದ್ದಂತೆ ಏರಿಯಾ ಫುಲ್ ಹೊಯ್ಸಳ ಪೊಲೀಸರು ಬೀಟ್ ಹಾಕಿದ್ರು.ರಾತ್ರಿ ಬೈಕ್ ಕದ್ದೊಯ್ದು ಸಂಜೆ ವೇಳೆಗೆ ಪುನಃ ಅದೇ ಸ್ಥಳಕ್ಕೆ ಬೈಕ್ ತಂದು ನಿಲ್ಲಿಸಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಟೆಕ್ಕಿ ಇಮ್ಯಾನುಯೆಲ್ ನಿಂದ ದೂರು ನೀಡಲಾಗಿದೆ.ಸಿಸಿಟಿವಿ ದೃಶ್ಯಾವಳಿ ಹಾಗೂ ಆಟೋ ನಂಬರ್ ಪ್ಲೇಟ್ ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದ ಶ್ವೇತ ಪತ್ರದಲ್ಲಿರುವಂತೆ ಯುಪಿಎ ಮತ್ತು ಎನ್ ಡಿಎ ನಡುವಿನ ವ್ಯತ್ಯಾಸ ಹೀಗಿದೆ