Publish Date: Wed, 17 Jan 2024 (14:00 IST)
Updated Date: Wed, 17 Jan 2024 (14:53 IST)
ಬೆಂಗಳೂರು-ಹಿಂದಿ ಯುವಕರಿಂದ ಕನ್ನಡದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ಎರಡು ದಿನಗಳ ಹಿಂದೆ ಘಟನೆ ನಡೆದಿದೆ.ಕ್ಷುಲ್ಲಕ ಕಾರಣಕ್ಕೆ ಶುರುವಾಗಿದ್ದ ಮಾತುಗಳು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದೆ.
ಮೂವರು ಬೇರೆ ರಾಜ್ಯದ ಯುವಕರಿಂದ ಹಲ್ಲೆ ನಡೆಸಿರುವ ವಿಡಿಯೋ ಫುಲ್ ವೈರೆಲ್ ಆಗಿದೆ.ಕನ್ನಡದ ಯುವಕನಿಗೆ ಹೀಗೆ ನಡು ರಸ್ತೆಯಲ್ಲಿಯೇ ತಳಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತವಾಗಿದ್ದು,ವಿಡಿಯೋ ಆಧರಿಸಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ದೂರು ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಪೊಲೀಸರು ಮಾಡುತ್ತಿದ್ದಾರೆ.