Publish Date: Sat, 03 Feb 2024 (10:16 IST)
Updated Date: Sat, 03 Feb 2024 (11:20 IST)
ಬೆಂಗಳೂರು-ನಗರದಲ್ಲಿ ರೋಡ್ ರೇಜ್ ಪ್ರಕರಣಗಳು ಮುಂದುವರೆದಿದೆ.ಕುಡಿದು ಗಾಡಿ ಓಡಿಸಿರೋದು ಅಲ್ಲದೇ ಆಟೋ ಚಾಲಕ ದರ್ಪತೋರಿರುವ ಘಟನೆ ಬೇಗೂರು ಮುಖ್ಯ ರಸ್ತೆಯ ಎಳೇನಹಳ್ಳಿ ಬಳಿ ನಡೆದಿದೆ.ಬೇಗೂರು - ಕೊಪ್ಪರಸ್ತೆಯ ಎಳೇನಹಳ್ಳಿಯಲ್ಲಿ ಇದೇ ತಿಂಗಳ 1 ನೇ ತಾರೀಖು ಘಟನೆ ನಡೆದಿದೆ.ರೈಟ್ ಸೈಡ್ ಇಂಡಿಕೇಟರ್ ಹಾಕಿಕೊಂಡು ಆಟೋ ಡ್ರೈವರ್ ಹೋಗುತ್ತಿದ್ದ.ಇದ್ರಿಂದ ಹಿಂದೆ ಬರುತ್ತಿದ್ದ ಕಾರಿನ ಚಾಲಕನಿಗೆ ಇದ್ರಿಂದ ಚಾಲನೆಗೆ ಕಷ್ಟವಾಗುತ್ತಿತ್ತು.
ಆಟೋ ಚಾಲಕ ಯಾವ ಕಡೆ ಚಲಿಸುತ್ತಾನೆಂದು ಗೊತ್ತಾಗುತ್ತಿರಲಿಲ್ಲ ಹೀಗಾಗಿ ಆಟೋ ಚಾಲಕನಿಗೆ ಇಂಡಿಕೇಟರ್ ಆಫ್ ಮಾಡುವಂತೆ ಕಾರು ಚಾಲಕ ಹೇಳಿದ್ದಾನೆ.ಇಷ್ಟಕ್ಕೆ ಕೋಪಗೊಂಡು ಆಟೋ ಚಾಲಕನಿಂದ ಅವಾಜ್ ಹಾಕಲಾಗಿದೆ ನಂತರ ಕಾರನ್ನು ಅಡ್ಡಗಟ್ಟಿ ಅವಾಜ್ ಹಾಕಿ, ಅವಾಚ್ಯ ಶಭ್ದಗಳಿಂದ ನಿಂದನೆ ಹಾಕಲಾಗಿದೆ.ಆಟೋ ಚಾಲಕನ ವರ್ತನೆಗೆ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.ಕಾರ್ ನ ಡ್ಯಾಶ್ ಕ್ಯಾಮ್ ನಲ್ಲಿ ಗಲಾಟೆಯ ವಿಡಿಯೋ ರೆಕಾರ್ಡ್ ಆಗಿದೆ.