Select Your Language

Notifications

webdunia
webdunia
webdunia
webdunia

ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ದರ್ಪ ತೋರಿದ ಮಹಿಳೆ..!

BMTC Bus Conductor Shows Darpa On Woman
bangalore , ಗುರುವಾರ, 27 ಜುಲೈ 2023 (17:16 IST)
ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದ ಎಲ್ಲ ಮಹಿಳೆಯರು ಸರ್ಕಾರಿ ಬಸ್ ಳಲ್ಲಿ  ಉಚಿತವಾಗಿ ಪ್ರಯಾಣ ಮಾಡಲಿ ಎಂಬ ನಿಟ್ಟಿನಲ್ಲಿ ಶಕ್ತಿ ಯೋಚನೆ ಜಾರಿ ಮಾಡಿದೆ. ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸುವಾಗ ತಮ್ಮ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ತೋರಿಸಿ  ಸರಕಾರಿ ಬಸ್ ಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಅರೆ ಇದೇನಪ್ಪ ಗೊತ್ತಿರೋ ವಿಚಾರಣೆ ಮತ್ತೆ ಹೇಳ್ತಾ ಇದ್ದಾರೆ ಅನ್ಕೊಂಡ್ರಾ, ಹೌದು ಅಸಲಿ ವಿಚಾರ ಇಲ್ಲೆ ಇರೋದು, ಸಿಲಿಕಾನ್ ಸಿಟಿ ಬೆಂಗಳೂರುನಲ್ಲಿ ಆದಷ್ಟು ಜನ ರಾಜ್ಯ,ದೇಶ, ವಿದೇಶದಿಂದಲೂ ಬಂದು ರಾಜಧಾನಿಯಲ್ಲಿ ನೆಲೆವೂರಿದ್ದಾರೆ. ಆದ್ರೆ ಇವರೆಲ್ಲ ಇಲ್ಲಿನ ಸವತ್ತುಗಳನ್ನೂ ಪಡೆಯುವ ಸಲವಾಗಿ ನಕಲಿ ದಾಖಲಾತೀಗಳನ್ನೂ ಮಾಡೊಕೋಡಿದ್ದಾರೆ. ಇನ್ನು ಮಹಿಳೆಯರು ಇದೆ ದಾಖಲಾತೀಗಳನ್ನ ತೋರಿಸಿ  ನಮಗೂ ಶಕ್ತಿ ಯೋಜನೆಯ ಟಿಕೆಟ್ ನೀಡಿ ನಮ್ಮ ಹತ್ತಿರವು ಐಡಿ ಗಳಿವೆ ಎಂದು ಕಂಡಕ್ಟರ್ ಗಳಜೊತೆ ಹೊರರಾಜ್ಯದ ಮಹಿಳೆಯರು ತಗಾದೆ ತೆಗಿತಿದ್ದಾರೆ.

ಬೆಂಗಳೂರಿನಲ್ಲಿ ಕಂಡಕ್ಟರ್ ಒಬ್ಬರು ಟಿಕೆಟ್ ಹರಿಯಲು ಮಹಿಳೆಯೊಬ್ಬರ ಬಳಿ ಆಧಾರ್ ಕಾರ್ಡ್ ಕೇಳಿದ್ದಾರೆ. ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆ ಕಂಡಕ್ಟರ್ ಮೇಲೆ ದರ್ಪ ತೋರಿ ಅವಮಾನ ಮಾಡಿದ್ದಾರೆ. ನನ್ನ ಬಳಿ ಈಗ ಆಧಾರ್ ಕಾರ್ಡ್ ಇಲ್ಲ. ನಾನು ಕೇಂದ್ರ ಸರ್ಕಾರದ ಉದ್ಯೋಗಿ. ಇದು ನನ್ನ ಸೆಂಟ್ರಲ್ ಗವರ್ನಮೆಂಟ್ ಜಾಬ್ ಐಡಿ ಕಾರ್ಡ್ ಇದೆ ಅದರಲ್ಲೇ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಅಡ್ರೆಸ್ ಇದೆ ನೋಡಿ ಎಂದು ಕಂಡಕ್ಟರ್ಗೆ ಸಮಜಾಯಿಷಿ ಕೊಟ್ಟಿದ್ದಾರೆ. ಜತೆಗೆ ಮೊಬೈಲ್ನಿಂದ ವಿಡಿಯೋ ಮಾಡಿ ಕಂಡಕ್ಟರ್ ಬಳಿ ಜಗಳ ತೆಗೆದಿದ್ದಲ್ಲದೆ ಸಹ ಪ್ರಯಾಣಿಕರೊಂದಿಗೂ ವಾಗ್ವಾದಕ್ಕೆ ಇಳಿದಿದ್ದಾಳೆ, ಇದು ಒಂದು ಮಾತ್ರವಲ್ಲ ದಿನನಿತ್ಯ ಹಿಂತ ಪ್ರಖರಣಗಳು ಹೆಚ್ಚುತ್ತಲೆ ಇದ್ದು ಹೊರ ರಾಜ್ಯದ ಮಹಿಳೆಯರು ನಕಲಿ ದಾಖಲೆಗಳನ್ನೂ ತೋರಿಸಿ ಟಿಕೇಟ್ ನೀಡುವಂತೆ ಕಂಡಕ್ಟರ್ಗಳಿಗೆ ಆವಾಜ್ ಹಾಕುತ್ತಿದ್ದರೆ. ಇಂತವರ ವಿರುದ್ಧ ಸಕಾರ ವಿಗಾವಹಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಜನ ಆಗ್ರಹೀಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಮುಂದಿನ 4 ವಾರ ಭಾರೀ ಮಳೆ ಎಚ್ಚರಿಕೆ