Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ- ಅಶ್ವಥ್ ನಾರಾಯಣ

ಸಿದ್ದರಾಮಯ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ- ಅಶ್ವಥ್ ನಾರಾಯಣ
bangalore , ಗುರುವಾರ, 27 ಜುಲೈ 2023 (15:31 IST)
ಗೃಹ ಇಲಾಖೆ ಕ್ರಮ ನೋಡಿದರೆ ಸರ್ಕಾರ ಬದುಕಿದೆಯಾ?ಇಲ್ಲವಾ ಎನ್ನುವ ಅನುಮಾನ ಬರುತ್ತಿದೆ ಎಂದು ಮಾಜಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.ಉಡುಪಿ ಘಟನೆ ನೋಡಿಯೂ ಸರ್ಕಾರದ ಆಶ್ಚರ್ಯಕರ ನಡೆ ಖಂಡನೀಯ.ಸಿದ್ದರಾಮಯ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ.ಇದು ಕೋಮುವಾದಿ ಸರ್ಕಾರ, ಜಿಹಾದಿ ಸರ್ಕಾರ ಎನ್ನುವುದು ಉಡುಪಿ ಘಟನೆ ನಿದರ್ಶನವಾಗಿದೆ.ವಿದ್ಯಾರ್ಥಿನಿಯರ ಮೇಲೆ ಪ್ರಕರಣ ದಾಖಲಿಸದೆ ಘಟನೆಯೇ ಆಗಿಲ್ಲ ಎನ್ನುವ ಮಾಹಿತಿ ನೀಡಿದರು,ತಪ್ಪೊಪ್ಪಿಕೊಂಡಿದ್ದಾರೆ, ವೀಡಿಯೋ ಡಿಲೀಟ್ ಆಗಿದೆ,ವೈರಲ್ ಆಗಿಲ್ಲ, ಸಂತ್ರಸ್ಥೆ ದೂರು ನೀಡಿಲ್ಲ ಹಾಗಾಗಿ ಪ್ರಕರಣ ದಾಖಲಿಸಲ್ಲ ಎನ್ನುವ ನಡೆ ಖಂಡನೀಯ.ಇದು ಹುಡುಗಾಟಿಕೆ, ಮಕ್ಕಳಾಟ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.ಇವರಿಗೆ ಮಾನ ಮರ್ಯಾದೆ ಇದೆಯಾ?ಹೆಣ್ಣುಮಕ್ಕಳ ಬಗ್ಗೆ ಕಿಂಚಿತ್ ಗೌರವ ಇದೆಯಾ?ಇವರ ನಾಯಕರು ಸೋನಿಯಾ, ಪ್ರಿಯಾಂಕ ಕೂಡ ಹೆಣ್ಣುಮಕ್ಕಳು,ಇವರಿಗೆ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ಇದೆಯಾ?ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿಯರನ್ನು ಬೆದರಿಸಿದ್ದಾರೆ,ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ, ಇದು ಖಂಡನೀಯ ಎಂದು‌ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. 
 
ಇದು ಸರ್ಕಾರವಾ? ಚುನಾಯಿತ ಸರ್ಕಾರ ನಡೆದುಕೊಳ್ಳುವ ರೀತಿಯ.ಡಿಕ್ಟೇಟರ್ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ,ಪ್ರಕರಣ ಬೆಳಕಿಗೆ ತಂದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ,ಈಗ ಪ್ರತಿರೋಧ ಹೆಚ್ಚಾದ ನಂತರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ.ಇವರ ಮನೆಯ ಮಕ್ಕಳು ಶೌಚಾಲಯಕ್ಕೆ ಹೋದಾಗ ವೀಡಿಯೋ ಮಾಡಿದರೆ ಆಗಲೂ ಸಣ್ಣ ವಿಷಯ ಎನ್ನಲಾಗುತ್ತಾ? ಇಷ್ಟೆಲ್ಲಾ ಆದರೂ ಏನೂ ಆಗಿಲ್ಲ ಎನ್ನುವ ಸರ್ಕಾರ ವಜಾ ಮಾಡಬೇಕು, ಗೃಹ ಸಚಿವರ ವಜಾ ಮಾಡಬೇಕು,ಇದು ಜಿಹಾದಿ ಸರ್ಕಾರ, ಯಾರನ್ನು ಬೇಕಾದರೂ ಕೊಲೆ ಮಾಡಿ,ರೇಪ್ ಮಾಡಿ ಎನ್ನುವ ಧೋರಣೆ ತಳೆದಿರುವ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ.ತಕ್ಷಣ ಪ್ರಕರಣ ಬಯಲಿಗೆಳೆದ ವಿದ್ಯಾರ್ಥಿನಿ ಮೇಲಿನ ದೂರು ವಾಪಸ್ ಪಡೆಯಬೇಕು,ಪ್ರಕರಣ ಸಿಬಿಐ, ಎನ್ಐಎಗೆ ವಹಿಸಬೇಕು.ನಾವು ಈ ಹುಡುಗಿ ವೀಡಿಯೋ ತೆಗೆಯುವ ಉದ್ದೇಶ ಹೊಂದಿರಲಿಲ್ಲ,ಬೇರೆ ಹುಡುಗಿ ವೀಡಿಯೋ ತೆಗೆಯಬೇಕಿತ್ತು ಎಂದುಕೊಂಡಿದ್ದೆವು ಎಂದು ಆರೋಪಿತ ವಿದ್ಯಾರ್ಥಿನಿಯರು ಹೇಳಿದ್ದಾರೆ.ಹಾಗಾಗಿ ಇದು ವ್ಯವಸ್ಥಿತ ಪಿತೂರಿ, ಪೂರ್ವನಿಯೋಜಿತ ಕೃತ್ಯ, ಜಿಹಾದಿ ಮನಸ್ಥಿತಿ ಇದೆ,ಅವರ ಟಾರ್ಗೆಟ್ ಬೇರೆ ಆಗಿದ್ದರು ಹಾಗಾಗಿ ಕೇಸ್ ಸಿಬಿಐಗೆ ವಹಿಸಬೇಕು ಎಂದು‌ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರಿಗೆ ರಕ್ಷಣೆ ಕೊಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೋತಿದ್ದಾರೆ-ಎಮ್ ಎಲ್ ಸಿ ತೇಜಸ್ವಿನಿ