Select Your Language

Notifications

webdunia
webdunia
webdunia
webdunia

ಕೈಯಲ್ಲಿ ಆಗದಿದ್ರೂ ಅಧಿಕಾರ ಬಿಡಲ್ಲ, ಕುರ್ಚಿ ಬಿಡಲ್ಲ - ಅಶ್ವಥ್ ನಾರಾಯಣ

ಕೈಯಲ್ಲಿ ಆಗದಿದ್ರೂ ಅಧಿಕಾರ ಬಿಡಲ್ಲ, ಕುರ್ಚಿ ಬಿಡಲ್ಲ - ಅಶ್ವಥ್ ನಾರಾಯಣ
bangalore , ಶುಕ್ರವಾರ, 7 ಜುಲೈ 2023 (15:20 IST)
ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಚಿವ ಅಶ್ವಥ್ ನಾರಾಯಣ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ಬಹಳ ಮುಖ್ಯವಾಗಿ ಸಿದ್ದರಾಮಯ್ಯ ಅವರು ಪ್ರಬಲ ನಾಯಕರು.ಇಂತ‌ಹ ಹೇಳಿಕೆ ಸೂಕ್ತ ಸರಿಯಲ್ಲ.ಸಿಎಂ‌ ಆದವರು ಅವರೇ ಕೈಚೆಲ್ಲಿದ್ದಾರೆ.
 
ನನ್ನ ಕೈಯಲ್ಲಿ ಆಗಲ್ಲ ಅಂತ.ಅಸಹಾಯಕರು ಮಾತ್ರ ಹೀಗೆ ಹೇಳೋದು.ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.ಅಸಹಾಯಕತೆ ಸಾಕಷ್ಟು ಕಾಲ ಅಧಿಕಾರದಲ್ಲಿ ಇದ್ದು, ಎನರ್ಜಿ ಇಲ್ಲ ಅನಿಸ್ತಿದೆ.75 ಆಗಿರೋದ್ರಿಂದ ಎಕ್ಸ್‌ಪೆರಿ ಡೇಟ್ ಬಂದಿರಬೇಕು.ಕೈಯಲ್ಲಿ ಆಗದಿದ್ರೂ ಅಧಿಕಾರ ಬಿಡಲ್ಲ, ಕುರ್ಚಿ ಬಿಡಲ್ಲ ಅನ್ನೋದು.ಆಪರೇಷನ್ ಗೆ ನಾವು ಕೈ ಹಾಕಲ್ಲ.ಸೆಲ್ಫ್ ವಿಕೆಟ್ ಹೊಡ್ಕೋಬೇಕು ಅಷ್ಟೇ.ದ್ವೇಷ, ಅಸೂಯೆ ರಾಜಕಾರಣ ಬಿಟ್ಟು.ಧರ್ಮ, ಸಂಸ್ಕೃತಿ ಎತ್ತಿ ಹಿಡಿಯಿರಿ ಎಂದು ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ
 
75 ಆಗಿ ಎಕ್ಸ್‌ಪಿರಿಡೇಟ್ ಆಗಿದೆ.ಬಿಜೆಪಿ ಮೇಲೆ ಹೇಳ್ತಿಲ್ಲ, ಪಕ್ಷದ ಒಳಗಿರೋ ಕಾಣ್ತಿರೋ ವ್ಯತ್ಯಾಸದಿಂದ ಹೇಳ್ತಿದ್ದಾರೆ.ಅದು ರಾಜಕಾರಣದ ಎಕ್ಸ್‌ಪಿರಿ.ಸರ್ಕಾರಿ ನೌಕರಿಯಲ್ಲಿ 60ಕ್ಕೆ ಎಕ್ಸ್‌ಪಿರಿ ಇಟ್ಟಿದ್ದಾರೆ.ರಾಜಕಾರಣದಲ್ಲಿ 75ಕ್ಕೆ ಆದ್ರೂ ಎಕ್ಸ್‌ಪೈರಿ ಇರಬೇಕು ಎಂದು ಕಾಂಗ್ರೆಸ್ ವಿರುದ್ಧ ಅಶ್ವಥ್ ನಾರಾಯಣ ಹರಿಹಾಯ್ದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯಕ್ಕೆ ನಾನೇ ವಿರೋಧ ಪಕ್ಷದ ನಾಯಕ ಎಂದ ಸೋಮಶೇಖರ್