ಉತ್ತರಪ್ರದೇಶ : ಅಯೋಧ್ಯೆಯಲ್ಲಿ ಸುತ್ತಾಡಲು ಮಹಿಳೆಯರಿಗಾಗಿ ಮಹಿಳಾ ಚಾಲಕರಿಂದಲೇ ನಿರ್ವಹಿಸಲ್ಪಡುವ ಪಿಂಕ್ ಆಟೋಗಳಿಗೆ ಚಾಲನೆ ನೀಡಲಾಗಿದೆ. ಸಧ್ಯಕ್ಕೆ ಕೇವಲ ಅಯೋಧ್ಯೆ ನಗರದಲ್ಲಿ ಕಾರ್ಯ ನಿರ್ವಹಿಸಲ್ಪಡುವ ಈ ಆಟೋಗಳನ್ನು ಮಹಿಳಾ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ರಸ್ತೆಗಿಳಿಸಲಾಗುತ್ತಿದೆ.
ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯ ಜ .22 ರಂದು ನಡೆಯಲಿದೆ. ಈಗಾಗಲೇ ರಾಜ್ಯಾದ್ಯಂತ ಈ ಅದ್ದೂರಿ ಮಹೋತ್ಸವಕ್ಕೆ ಭರದಿಂದ ಸಿದ್ದತೆ ನಡೆಸಲಾಗುತ್ತಿದೆ. ಈ ನಡುವೆ ಅಯೋಧ್ಯೆಗೆ ಭೇಟಿ ನೀಡುವ ಮಹಿಳಾ ಪ್ರವಾಸಿಗರ ಸುರಕ್ಷತೆಗಾಗಿ ಉತ್ತರ ಪ್ರದೇಶ ಸರ್ಕಾರ ಹೊಸದೊಂದು ಕ್ರಮಕ್ಕೆ ಮುಂದಾಗಿದೆ.
ಉತ್ತರ ಪ್ರದೇಶ ಇಡೀ ಭಾರತದಲ್ಲೇ ಅತಿ ಹೆಚ್ಚು ಅತ್ಯಾಚಾರ ನಡೆಯುವ ರಾಜ್ಯಗಳ ಪೈಕಿ ಎರಡನೇ ಸ್ಥಾನ ಪಡೆದಿದೆ. ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡುವ ಮಹಿಳಾ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದೆಂಬ ಉದ್ದೇಶದಿಂದ ಈ ಕ್ರಮಕ್ಕೆ ಉತ್ತರಪ್ರದೇಶ ಸರ್ಕಾರ ಮುಂದಾಗಿದೆ.