Select Your Language

Notifications

webdunia
webdunia
webdunia
webdunia

ರಾಮಮಂದಿರಕ್ಕಾಗಿ ಪ್ರಧಾನಿ ಮೋದಿ 11 ದಿನದ ವ್ರತ ಹೇಗಿರುತ್ತೆ?

modi in nasik

Krishnaveni K

ನವದೆಹಲಿ , ಶನಿವಾರ, 13 ಜನವರಿ 2024 (11:15 IST)
ನವದೆಹಲಿ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಕಾರ್ಯದಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ 11 ದಿನಗಳ ವ್ರತ ಕೈಗೊಂಡಿದ್ದಾರೆ.

ಜನವರಿ 22 ರಂದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿದೆ. ಅಯೋಧ‍್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ದಿನದವರೆಗೂ ಪ್ರಧಾನಿ ಮೋದಿ ಮಡಿಯಲ್ಲಿರಲಿದ್ದಾರೆ.

ಅದರಂತೆ ಪ್ರಧಾನಿ ಮೋದಿ ಇನ್ನು 11 ದಿನಗಳವರೆಗೆ ಕಠಿಣ ಉಪವಾಸ ವ್ರತ ಮಾಡಲಿದ್ದಾರೆ. ಇದರ ಅಂಗವಾಗಿಯೇ ಅವರು ನಿನ್ನೆ ಕಾಲ ರಾಮ್ ದೇಗುಲ ಸ್ವಚ್ಛತಾ ಕೆಲಸದಲ್ಲಿ ಭಾಗಿಯಾಗಿದ್ದರು. ಈ ವ್ರತ ಮಾಡುವವರು ಪ್ರಾತಃ ಕಾಲದಲ್ಲಿಯೇ ಎದ್ದು ಧ‍್ಯಾನ ಮಾಡಿ, ಸಾತ್ವಿಕ ಆಹಾರ ಸೇವಿಸಬೇಕು. 11 ದಿನಗಳ ಈ ಆಧ್ಯಾತ್ಮಕ ಅನುಷ್ಠಾನವನ್ನು ಯಮ ನಿಯಮ ಎಂದೂ ಕರೆಯುತ್ತಾರೆ. ಯೋಗ, ಧ್ಯಾನ ಸೇರಿದಂತೆ ಕಠಿಣ ನಿಯಮಗಳನ್ನು ಪಾಲಿಸಬೇಕು.

ವಿಶೇಷವೆಂದರೆ ಪ್ರಧಾನಿ ಮೋದಿ ಈ ಅನುಷ್ಠಾನವನ್ನು ಶ್ರೀರಾಮ ಚಂದ್ರನಿಗೆ ವನವಾಸದ ವೇಳೆ ಹೆಚ್ಚು ಸಮಯ ಕಳೆದಿದ್ದ ಪಂಚವಟಿಯಲ್ಲೇ ಆರಂಭಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಕೈ ತಪ್ಪಿದ ಟಿಕೆಟ್: ಸುಮಲತಾ ಮುನಿಸು