Select Your Language

Notifications

webdunia
webdunia
webdunia
webdunia

ರಾಮನ ಬಗ್ಗೆ ಅವಹೇಳನ: ನೆಟ್ ಫ್ಲಿಕ್ಸ್ ನಿಂದ ಎತ್ತಂಗಡಿಯಾದ ನಯನತಾರಾ ಸಿನಿಮಾ

annapoorani -nayanthara

Krishnaveni K

ಚೆನ್ನೈ , ಶುಕ್ರವಾರ, 12 ಜನವರಿ 2024 (11:33 IST)
ಚೆನ್ನೈ: ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮ ಚಂದ್ರನ ಬಗ್ಗೆ ಆಕ್ಷೇಪಾರ್ಹ ಡೈಲಾಗ್ ಇದ್ದ ನಯತನಾರಾ ಅಭಿನಯದ ಅನ್ನಪೂರ್ಣಿ ಸಿನಿಮಾ ನೆಟ್ ಫ್ಲಿಕ್ಸ್ ನಿಂದ ಎತ್ತಂಗಡಿಯಾಗಿದೆ.

ಸಿನಿಮಾದಲ್ಲಿ ಶ್ರೀರಾಮನನ್ನು ಮಾಂಸಾಹಾರಿ ಎನ್ನಲಾಗಿತ್ತು. ಜೊತೆಗೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಅನೇಕ ದೃಶ್ಯಗಳಿತ್ತು. ಹೀಗಾಗಿ ಸಿನಿಮಾ ವಿರುದ್ಧ ಹಲವು ದೂರು ದಾಖಲಾಗಿತ್ತು. ಜೊತೆಗೆ ಸಾರ್ವಜನಿಕವಾಗಿಯೂ ಬಾರೀ ಟೀಕೆ ವ್ಯಕ್ತವಾಗಿತ್ತು.

ಈ ಸಿನಿಮಾ ನೆಟ್ ಫ್ಲಿಕ್ಸ್ ಒಟಿಟಿ ಫ್ಲಾಟ್ ಫಾರಂನಲ್ಲಿ ಬಿಡುಗಡೆಯಾಗಿತ್ತು. ಆದರೆ ವಿವಾದದ ಬಳಿಕ ಸಿನಿಮಾವನ್ನು ನೆಟ್ ಫ್ಲಿಕ್ಸ್ ಡಿಲೀಟ್ ಮಾಡಿದೆ.

ಇದೀಗ ಸಿನಿಮಾದ ವಿವಾದಿತ ದೃಶ್ಯಗಳು, ಡೈಲಾಗ್ ಗಳಿಗೆ ಕತ್ತರಿ ಹಾಕಿದ ಬಳಿಕವಷ್ಟೇ ಹೊಸದಾಗಿ ಸಿನಿಮಾ ಮತ್ತೆ ಬಿಡುಗಡೆಯಾಗುವ ಸಾಧ‍್ಯತೆಯಿದೆ.  ಈ ಸಿನಿಮಾದಲ್ಲಿ ನಯನತಾರಾ ತಂದೆಯ ಪಾತ್ರದಲ್ಲಿ ಕನ್ನಡ  ನಟ ಅಚ್ಯುತ್ ಕುಮಾರ್ ನಟಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಬ್ ನಲ್ಲಿ ಪಾರ್ಟಿ ಕೇಸ್: ದರ್ಶನ್ ಸೇರಿ ಎಲ್ಲಾ ನಟರು ಇಂದು ವಿಚಾರಣೆಗೆ ಹಾಜರು