Publish Date: Mon, 11 Dec 2023 (12:01 IST)
Updated Date: Mon, 11 Dec 2023 (12:01 IST)
ಹೈದರಾಬಾದ್: ಸೌತ್ ಇಂಡಿಯಾ ಸೂಪರ್ ಸ್ಟಾರ್ ನಟಿ ನಯನತಾರಾಗೆ ತಮ್ಮನ್ನು ಹೀಗೆ ಕರೆದರೆ ಮುಜುಗರವಾಗುತ್ತದಂತೆ! ಹೀಗಂತ ಅವರೇ ಹೇಳಿರುವ ವಿಡಿಯೋವೊಂದು ವೈರಲ್ ಆಗಿದೆ.
ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿರುವ ನಯನರಾತಾ ಇತ್ತೀಚೆಗೆ ಬಾಲಿವುಡ್ ನಲ್ಲೂ ಜವಾನ್ ಸಿನಿಮಾ ಮೂಲಕ ಹವಾ ಎಬ್ಬಿಸಿದ್ದರು. ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯುವುದು ವಾಡಿಕೆ.
ಆದರೆ ನಯನತಾರಾಗೆ ಮಾತ್ರ ತಮ್ಮನ್ನು ಲೇಡಿ ಸೂಪರ್ ಸ್ಟಾರ್ ಎಂದು ಯಾರಾದರೂ ಕರೆದರೆ ಮುಜುಗರವಾಗುತ್ತದಂತೆ. ದಯವಿಟ್ಟು ನನ್ನ ಹಾಗೆ ಕರೆಯಬೇಡೀಪ್ಪಾ ಎಂದಿದ್ದಾರೆ ನಯನತಾರಾ.
39 ವರ್ಷದ ನಟಿ ಬಹಳ ವರ್ಷಗಳಿಂದಲೂ ಸಿನಿಮಾದಲ್ಲಿದ್ದರೂ ತಮ್ಮ ಬೇಡಿಕೆ ಕಳೆದುಕೊಂಡಿಲ್ಲ. ಮದುವೆಯಾದ ಬಳಿಕ ತಮ್ಮ ಪಾತ್ರದ ವಿಚಾರದಲ್ಲಿ ನಯನ್ ಮತ್ತಷ್ಟು ಚ್ಯೂಸಿಯಾಗಿದ್ದಾರೆ. ಹಾಗಿದ್ದರೂ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ಸೂಪರ್ ಸ್ಟಾರ್ ನಟರೇ ಕ್ಯೂನಲ್ಲಿದ್ದಾರೆ.