Publish Date: Fri, 12 Jan 2024 (09:01 IST)
Updated Date: Fri, 12 Jan 2024 (09:07 IST)
ಮುಂಬೈ: ಭಾರತಕ್ಕೆ ಅವಮಾನ ಮಾಡಿದ ಮಾಲ್ಡೀವ್ಸ್ ಮೇಲೆ ಸಾರ್ವಜನಿಕರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ.
ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಮತ್ತು ಭಾರತೀಯ ಪ್ರವಾಸೀ ತಾಣದ ಬಗ್ಗೆ ಅಣಕವಾಡಿದ್ದ ಮಾಲ್ಡೀವ್ಸ್ ಮೇಲೆ ಭಾರತೀಯರು ಈಗ ಬಹಿಷ್ಕಾರದ ಅಭಿಯಾನ ಮಾಡುತ್ತಿದ್ದಾರೆ. ಪರಿಣಾಮ, ಮಾಲ್ಡೀವ್ಸ್ ಗೆ ಹೊರಟಿದ್ದ ಎಷ್ಟೋ ಮಂದಿ ಪ್ರವಾಸ ರದ್ದು ಮಾಡಿ ಆಕ್ರೋಶ ತೀರಿಸಿದ್ದಾರೆ. ಇದರಿಂದ ಮಾಲ್ಡೀವ್ಸ್ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿದೆ.
ಎಷ್ಟೋ ಸಿನಿಮಾ ಕಲಾವಿದರೂ ಮಾಲ್ಡೀವ್ಸ್ ಬಹಿಷ್ಕಾರ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಇದಕ್ಕೆ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಕೇವಲ ಮಾಲ್ಡೀವ್ಸ್ ಪ್ರವಾಸ ಬಹಿಷ್ಕರಿಸಿದರೆ ಸಾಲದು ಇನ್ನು ಮುಂದೆ ಅಲ್ಲಿ ಚಿತ್ರೀಕರಣವನ್ನೂ ಮಾಡಬಾರದು ಎಂದಿದ್ದಾರೆ.
ಒಂದು ವೇಳೆ ಮಾಲ್ಡೀವ್ಸ್ ನಲ್ಲಿ ಚಿತ್ರೀಕರಣ ಮಾಡಿದರೆ ಆ ಸಿನಿಮಾವನ್ನೇ ಬಹಿಷ್ಕರಿಸುವುದಾಗಿ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೇವಲ ನೆಟ್ಟಿಗರಷ್ಟೇ ಅಲ್ಲ, ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಸಿಬ್ಬಂದಿ ನಿರ್ಮಾಪಕರಿಗೆ ಪತ್ರ ಬರೆದು ಮಾಲ್ಡೀವ್ಸ್ ನಲ್ಲಿ ಚಿತ್ರೀಕರಣ ನಡೆಸದಂತೆ ಮನವಿ ಮಾಡಿದ್ದಾರೆ.